ಕಲ್ಕಟ್ಟ: ಮನೆಗೆ ನುಗ್ಗಿ ನಗ, ನಗದು ಕಳವು

Update: 2016-10-28 16:24 GMT

ಕೊಣಾಜೆ, ಅ. 28: ಮನೆಯೊಂದರ ಕಿಟಕಿ ಮೂಲಕ ಒಳನುಗ್ಗಿದ ಕಳ್ಳರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಗ್ರಾಮದ ಕಲ್ಕಟ್ಟ ಬಟ್ಯಡ್ಕ ದಲ್ಲಿ ಗುರುವಾರ ತಡತಾತ್ರಿ ನಡೆದಿದೆ.

ಬಟ್ಯಡ್ಕ ನಿವಾಸಿ ಸುಲೈಮಾನ್ ಗುರುವಾರ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಬಂದಿದ್ದರು. ಅವರ ಪುತ್ರಿಯ ವ್ಯಾನಿಟಿ ಬ್ಯಾಗ್‌ನಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದರು ಎನ್ನಲಾಗಿದೆ. ಗುರುವಾರ ಅವರು ಮಲಗಿದ ಬಳಿಕ ಕಳ್ಳರ ತಂಡ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಕಿಟಕಿಯ ಸರಳುಗಳನ್ನು ಸರಿಸಿ ಬಾಗಿಲು ಒಡೆದು ಒಳ ನುಗ್ಗಿ ಸುಲೈಮಾನ್‌ರ ಪುತ್ರ ಮಲಗಿದ ಕೋಣೆಗೆ ತೆರಳಿ ಅಲ್ಲೇ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿ ಮಗುವಿನ ಎರಡು ಚಿನ್ನದ ಉಂಗುರ, ಮೂರು ಬಳೆ ಮತ್ತು 2 ಸಾವಿರ ರೂ. ನಗದು ದೋಚಿದ್ದಾರೆ. ಕಳವಾದ ಸೊತ್ತಿನ ಮೌಲ್ಯ 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News