×
Ad

ಆಳ್ವಾಸ್‌ನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

Update: 2016-10-28 23:41 IST

ಮೂಡುಬಿದಿರೆ, ಅ.28: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಬೃಹತ್ ಉಚಿತ ಮಧುಮೇಹ ತಪಾಸಣಾ ಶಿಬಿರವು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಹಾಗೂ ಮಾಜಿ ಸಚಿವ ಕೆ. ಅಯಚಂದ್ರ ಜೈನ್, ಪುರಾತನ ಶಾಸ್ತ್ರವಾದ ಆಯುರ್ವೇದದ ಮಹತ್ವ ಹಾಗೂ ಈಗ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ದಿಕ್ಸೂಚಿ ಉಪನ್ಯಾಸ ನೀಡಿದ ಆಳ್ವಾಸ್ ಹೆಲ್ತ್ ಸೆಂಟರ್‌ನ ತಜ್ಞ ಡಾ.ಸದಾನಂದ ನಾಯಕ್, ಮಧುಮೇಹ ರೋಗದ ಕಾರಣ, ಲಕ್ಷಣ ಹಾಗೂ ಉಪಶಮನದ ಬಗ್ಗೆ ವಿವರವಾಗಿ ತಿಳಿಯಪಡಿಸಿದರು.

ಮುಖ್ಯ ಅತಿಥಿಗಳಾದ ಅಲಂಗಾರು ರೋಸರಿ ಚರ್ಚ್‌ನ ರೆ.ಫಾ.ಬಾಸಿಲ್ ವಾಸ್ ಆಯುರ್ವೇದ ಚಿಕಿತ್ಸೆಯ ಅಪಾರ ಸಾಧ್ಯತೆಗಳ ಬಗ್ಗೆ ಹೇಳುತ್ತಾ ತಾನು ಆಯುರ್ವೇದದ ಅಭಿಮಾನಿ ಎಂದು ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ .ಕೆ. ಅಮರನಾಥ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಗತ್ಯವನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಗದೀಶ್ ಅಧಿಕಾರಿಯವರು ಶಿಬಿರಕ್ಕೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ. ವಿನಯಚಂದ್ರ ಶೆಟ್ಟಿ ಸ್ವಾಗತಿಸಿದರು. ಡಾ. ಕೃಷ್ಣಮೂರ್ತಿ ಎಂ.ಎಸ್. ವಂದಿಸಿದರು. ಡಾ.ಪೂಜಾರಾಣಿ ಕೆ.ಪಿ. ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News