ಬಂಡುಕೋರರಿಂದ ಕ್ಷಿಪಣಿ ದಾಳಿ: 15 ನಾಗರಿಕರ ಸಾವು
Update: 2016-10-28 23:51 IST
ಬೆರೂತ್ (ಲೆಬನಾನ್), ಅ. 28: ಸಿರಿಯದ ಅಲೆಪ್ಪೊದಲ್ಲಿ ಸರಕಾರ ನಿಯಂತ್ರಣ ಹೊಂದಿರುವ ಭಾಗಗಳ ಮೇಲೆ ಬಂಡುಕೋರರು ನಡೆಸಿದ ರಾಕೆಟ್ ದಾಳಿಗಳಲ್ಲಿ ಕನಿಷ್ಠ 15 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ನಗರದ ಪೂರ್ವ ಭಾಗದ ಜಿಲ್ಲೆಗಳಿಗೆ ಸರಕಾರಿ ಪಡೆಗಳು ಹಾಕಿರುವ ಮುತ್ತಿಗೆಯನ್ನು ಸಡಿಲಿಸುವ ಕಾರ್ಯಾಚರಣೆಯ ಭಾಗವಾಗಿ ಬಂಡುಕೋರರು ‘‘ನೂರಾರು’’ ಕ್ಷಿಪಣಿಗಳನ್ನು ಪಶ್ಚಿಮ ಅಲೆಪ್ಪೊದತ್ತ ಹಾರಿಸಿದ್ದಾರೆ ಎಂದು ಅದು ತಿಳಿಸಿದೆ.