ಮಟ್ಕಾ: ಮೂವರ ಬಂಧನ
Update: 2016-10-29 00:03 IST
ಉಡುಪಿ, ಅ.28: ಪುತ್ತೂರು ಗ್ರಾಮದ ಕೊಡಂಕೂರು ಜಂಕ್ಷನ್ ಬಳಿ ಅ.27ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಹಿರಿಯಡ್ಕ ಭಜನಾ ಕಟ್ಟೆಯ ನಿವಾಸಿ ಮಂಜುನಾಥ (63) ಹಾಗೂ ಕೊಂಡಕೂರಿನ ದೇವರಾಜ (45) ಎಂಬವರನ್ನು ಉಡುಪಿ ಪೊಲೀಸರು ಬಂಧಿಸಿ 1,510ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಗಿಳಿಯಾರು ಗ್ರಾಮದ ಅಮೃತ್ ಬಾರ್ ಬಳಿ ಅ.27ರಂದು ಮಟ್ಕಾ ಜುಗಾರಿ ನಡೆಸುತ್ತಿದ್ದ ಬೇಳೂರು ಗ್ರಾಮದ ಗುಳ್ಳಾಡಿಯ ಪ್ರವೀಣ್ (42) ಎಂಬವರನ್ನು ಕೋಟ ಪೊಲೀಸರು ಬಂಧಿಸಿ 6,630ರೂ. ನಗದು ವಶಪಡಿಸಿಕೊಂಡಿದ್ದಾರೆ.