×
Ad

ಉಪ್ಪಿನಂಗಡಿ: ಬೈಕ್‌ಗಳ ಮಧ್ಯೆ ಢಿಕ್ಕಿ; ಸವಾರರಿಗೆ ಗಾಯ

Update: 2016-10-29 00:03 IST

ಉಪ್ಪಿನಂಗಡಿ, ಅ.28: ಬೈಕ್‌ಗಳ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕರಾಯದ ನಿಝಾಮ್ (32) ಹಾಗೂ ಉಪ್ಪಿನಂಗಡಿ ಬಳಿಯ ಬಿಳಿಯೂರು ತೋಟ ನಿವಾಸಿ ಶಶಿಧರ್ (28) ಗಾಯಗೊಂಡ ಬೈಕ್ ಸವಾರರು. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದಿಂದ ಗಾಯಗೊಂಡ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟರೂ ಹೆದ್ದಾರಿಯಲ್ಲಿ ಸಾಗಿದ ಯಾವುದೇ ವಾಹನಗಳು ನಿಲ್ಲಿಸಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯರು ಉಪ್ಪಿನಂಗಡಿ ಡಿವಿಜನ್‌ನ ಕೆಸಿಎಫ್ ಮತ್ತು ಎಸ್ಸೆಸ್ಸೆಫ್‌ನಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News