ನಾಳೆ ಅಲ್ಪಸಂಖ್ಯಾತರ ಭವನ ಉದ್ಘಾಟನೆ
Update: 2016-10-29 00:05 IST
ಮಂಗಳೂರು, ಅ.28: ನಗರದ ಪಾಂಡೇಶ್ವರ ಓಲ್ಡ್‌ಕೆಂಟ್ ರಸ್ತೆಯ ಬಳಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ‘ಅಲ್ಪಸಂಖ್ಯಾತರ ಭವನ’ದ ಉದ್ಘಾಟನೆ ಅ.30ರಂದು ನಡೆಯಲಿದೆ.
ಅಂದು ಅಪರಾಹ್ನ 3 ಗಂಟೆಗೆ ಪ್ರಾಥಮಿಕ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ತನ್ವೀರ್ ಸೇಠ್ ‘ಭವನ’ ಉದ್ಘಾಟಿಸಲಿದ್ದಾರೆ. ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.