×
Ad

ನೀರಲ್ಲಿ ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಿದವರಿಗೆ ಪತಿ ನೀಡಿದ ಬಹುಮಾನ ಏನು ಗೊತ್ತೇ?

Update: 2016-10-29 09:02 IST

ಅಹ್ಮದಾಬಾದ್, ಅ.29: ನೀರಿನಲ್ಲಿ ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಿದ ಅಹ್ಮದಾಬಾದ್ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಯ ಮೇಲೆ ಆಕೆಯ ಪತಿ ಹಲ್ಲೆ ನಡೆಸಿದ ವಿಚಿತ್ರ ಪ್ರಕರಣ ವರದಿಯಾಗಿದೆ.
ಗುರುವಾರ ಸಾಬರಮತಿ ನದಿ ತೀರದಲ್ಲಿ ನೀರಿಗೆ ಹಾರಿದ 37 ವರ್ಷದ ಮಹಿಳೆಯೊಬ್ಬರನ್ನು ಎಎಫ್‌ಇಎಸ್ ಸಿಬ್ಬಂದಿ ನೀರಿನಿಂದ ಎಳೆದು ತಂದು ಸುರಕ್ಷಿತವಾಗಿ ದಡ ಸೇರಿಸಿದರು. ಆದರೆ ದಡದಲ್ಲಿದ್ದ ಪತಿ ಸಿಬ್ಬಂದಿಯ ಜತೆ ಜಗಳ ತೆಗೆದು, ಏಕೆ ಆಕೆಯನ್ನು ರಕ್ಷಿಸಿದ್ದು ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ.
"ಪತಿ ಸಿಎನ್‌ಜಿ ಪಂಪ್ ಮಾಲಕನಾಗಿದ್ದು, ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ವಿಫಲಗೊಳಿಸಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ತರಾಟೆಗೆ ತೆಗೆದುಕೊಂಡ. ಜತೆಗೆ ನಮ್ಮ ಭಾವಚಿತ್ರವನ್ನೂ ಸೆರೆಹಿಡಿದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕಿದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ" ಎಂದು ಎಎಫ್‌ಇಎಸ್ ಸಿಬ್ಬಂದಿ ಭರತ್ ಮಂಗೇಲಾ ವಿವರಿಸಿದ್ದಾರೆ,
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಎಎಫ್‌ಇಎಸ್ ಸಿಬ್ಬಂದಿ, ಪತ್ನಿ ಹಾಗೂ ಪತಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ದಂಪತಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವೈವಾಹಿಕ ವೈಮನಸ್ಸಿನಿಂದ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಮಹಿಳೆಗೆ ಬಾಹ್ಯ ಸಂಬಂಧವಿದೆ ಎಂದು ಶಂಕಿಸಿ ಪತಿ ಜಗಳ ತೆಗೆಯುತ್ತಿದ್ದುದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News