ಜಮ್ಮು-ಮತ್ತು ಕಾಶ್ಮೀರದ ಮಾಚಿಲ್ ಸೆಕ್ಟರ್ ನಲ್ಲಿ ಇನ್ನೊಬ್ಬ ಯೋಧ ಹುತಾತ್ಮ
Update: 2016-10-29 10:17 IST
ಶ್ರೀನಗರ, ಅ.29: ಜಮ್ಮು ಮತ್ತು ಕಾಶ್ಮೀರದ ಕುಪ್ಪಾರದ ಮಾಚಿಲ್ ಸೆಕ್ಟರ್ ನಲ್ಲಿ ಪಾಕ್ ಯೋಧರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.
ನಿತಿನ್ ಸುಭಾಷ್ ಹುತಾತ್ಮರಾದ ಬಿಎಸ್‌ಎಫ್ ಯೋಧ ಎಂದು ತಿಳಿದು ಬಂದಿದೆ. ನಿನ್ನೆ ಹುತಾತ್ಮರಾದ ಯೋಧ ಮನ್ ದೀಪ್ ಅವರ ಅಂಗಾಂಗಳನ್ನು ಕತ್ತರಿಸಿ ಉಗ್ರರು ಕೌರ್ಯ ಮೆರೆದಿದ್ದಾರೆ.
ಬಿಎಸ್‌ಎಫ್ ಯೋಧನನ್ನು ಕುಪ್ವಾರಾ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ಒಳನುಗ್ಗಿದ ಉಗ್ರರು ಭಾರತೀಯ ಯೋಧನನ್ನು ಕೊಂದಿದ್ದಾರೆ. ಯೋಧನ ಕತ್ತರಿಸಿದ ಶರೀರ ಮಾಚಿಲ್ ವಲಯದಲ್ಲಿ ಪತ್ತೆಯಾಗಿದೆ. ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಗೆ ಓರ್ವ ಉಗ್ರ ಬಲಿಯಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ಎಸ್.ಜಯಶಂಕರ‍್ ಅವರು ಪಾಕಿಸ್ತಾನದ ಹೈಕಮಿಶನರ‍್ ಅಬ್ದುಲ್ ಬಾಸಿತ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.