ಚಿಕಾಗೊದಲ್ಲಿ ಅಮೆರಿಕದ ವಿಮಾನದಲ್ಲಿ ಬೆಂಕಿ; ತಪ್ಪಿದ ಭಾರಿ ಅನಾಹುತ; 169 ಮಂದಿ ಪಾರು
Update: 2016-10-29 11:42 IST
ಚಿಕಾಗೊ, ಅ.29: ಚಿಕಾಗೊದಿಂದ ಮಿಯಾಮಿಗೆ ಹೊರಟಿದ್ದ ಅಮೆರಿಕದ ವಿಮಾನವೊಂದು ರನ್ ವೇಯಿಂದ ಹೊರಟ ಬೆನ್ನಲ್ಲೆ ವಿಮಾನದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್ ಕೂಡಲೇ ವಿಮಾನವನ್ನು ರನ್ ವೇಯಲ್ಲಿ ಇಳಿಸಿದ ಕಾರಣದಿಂದಾಗಿ ಭಾರಿ ಅನಾಹುತ ತಪ್ಪಿದೆ. ಇಪ್ಪತ್ತು ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಮೆರಿಕ ಏರ್ ಲೈನ್ಸ್ ಗೆ ಸೇರಿದ ಪ್ಲೈಟ್ 383, ಬೋಯಿಂಗ್ 767 ಚಿಕಾಗೋದ ಓಹಾರೆ ಏರ್‍ಪೋರ್ಟ್‍ನಿಂದ ಹೊರಡುತ್ತಿದ್ದಂತೆ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತೆನ್ನಲಾಗಿದೆ.161ಪ್ರಯಾಣಿಕರನ್ನು 8 ಸಿಬ್ಬಂದಿಗಳನ್ನು ಹೊತ್ತು ಹೊರಟಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಾಗ ಪೈಲೆಟ್ ಕೂಡಲೇ ವಿಮಾನವನ್ನು ರನ್‌ವೇಯಲ್ಲಿ ಇಳಿಸಿದರು. ಪ್ರಯಾಣಿಕರನ್ನು ಕೂಡಲೇ ಕೆಳಗಿಳಸಲಾಯಿತು. ಅಗ್ನಿಶಾಮಕದ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ.