ವ್ಯಾಪಾರಸ್ಥರಿಗೆ ಉದ್ಯಮ ಪ್ರಮಾಣ ಪತ್ರ ಕಡ್ಡಾಯ
Update: 2016-10-29 14:23 IST
ಭಟ್ಕಳ, ಅ.29: ಅಂಗಡಿ ವ್ಯಾಪಾರಸ್ಥರು ಉದ್ಯಮ ಪ್ರಮಾಣ ಪಡೆಯುವುದು ಕಡ್ಡಾಯವಾಗಿದ್ದು, ಉದ್ಯಮ ಪ್ರಮಾಣ ಪತ್ರ ಹೊಂದಿರದ ವ್ಯಾಪಾರಸ್ಥರು ಇದನ್ನು ಕೂಡಲೆ ಪಡೆದುಕೊಳ್ಳುವಂತೆ ಭಟ್ಕಳ ಪುರಸಭೆಯ ಹಿರಿಯ ಆಹಾರ ನಿರೀಕ್ಷಕಿ ಸುಜಿಯಾ ಸೋಮನ್ ಸೂಚಿಸಿದ್ದಾರೆ. ಅವರು ಭಟ್ಕಳ ನಗರ ವ್ಯಾಪ್ತಿಯಲ್ಲಿರುವ ಅಂಗಡಿಗಳ ಪರಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ 125 ಅಂಗಡಿಗಳಿಗೆ ತೆರಳಿ ಉದ್ಯಮ ಪ್ರಮಾಣ ಪತ್ರ ಪರಿಶೀಲಿಸಲಾಗಿದೆ. ಕೆಲವು ವ್ಯಾಪಾರಸ್ಥರಲ್ಲಿ ಪ್ರಮಾಣ ಪತ್ರ ಇಲ್ಲದಿರುವುದು ಕಂಡುಬಂದಿದೆ. ಯಾವುದೇ ವ್ಯಾಪಾರ, ವಹಿವಾಟು ನಡೆಸುವವರು ಉದ್ಯಮ ಪ್ರಮಾಣ ಪತ್ರ ಪಡೆಯುವುದು ಅಗತ್ಯವಾಗಿದ್ದು, ಈ ಬಗ್ಗೆ ಪತ್ರಿಕೆಗಳಲ್ಲೂ ಪ್ರಕಟನೆೆ ನೀಡಲಾಗಿದೆ. ಅಂಗಡಿಗಳ ಮಾಲಕರು ಆದಷ್ಟು ಬೇಗ ಉದ್ಯಮ ಪ್ರಮಾಣ ಪತ್ರ ಪಡೆದು ಅದನ್ನು ಅಂಗಡಿಯಲ್ಲಿ ಇಟ್ಟುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಹಾಯಕ ಕಿರಣ್ ಮುಂತಾದವರಿದ್ದರು