×
Ad

ಹೈನುಗಾರರ ಪ್ರೋತ್ಸಾಹಧನ ದ್ವಿಗುಣ

Update: 2016-10-29 14:36 IST

ಉಡುಪಿ, ಅ.29: ಹೈನುಗಾರರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿ ಸರಕಾರ ಆದೇಶಿಸಿದ್ದು, ಪ್ರಸ್ತುತ 4 ರೂ.ನಂತೆ ಪರಿಷ್ಕರಿಸಿ ನಿಗದಿಪಡಿಸಿದೆ ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
2016-17ನೆ ಸಾಲಿನ ಆಯವ್ಯಯದಲ್ಲಿ 98,897 ಲಕ್ಷ ರೂ. ಅನುದಾನವನ್ನು ಹೈನುಗಾರರಿಗೆ ಪ್ರೋತ್ಸಾಹಧನವನ್ನು ವಿತರಿಸಲು ನಿಗದಿಪಡಿಸಲಾಗಿದೆ. ಇದನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಎರಡು ಕಂತುಗಳಲ್ಲಿ 1284 ಲಕ್ಷ ರೂ. ಪ್ರೋತ್ಸಾಹಧನ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News