ಉಪ್ಪಳದಲ್ಲಿ ಪೊಲೀಸ್ ಠಾಣೆ : ಪಿಣರಾಯಿ ವಿಜಯನ್ ಭರವಸೆ

Update: 2016-10-29 11:08 GMT

ಕಾಸರಗೋಡು,ಅ.29 : ಉಪ್ಪಳದಲ್ಲಿ ಪೊಲೀಸ್  ಠಾಣೆ ಆರಂಭಿಸುವ ಬಗ್ಗೆ ಸರಕಾರ ಆದ್ಯತೆ ನೀಡಲಿದ್ದು, ಶೀಘ್ರ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ  ಮಂಜೇಶ್ವರ ಶಾಸಕ ಪಿ . ಬಿ ಅಬ್ದುಲ್ ರಜಾಕ್ ರವರ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಯವರು ಈ ಕುರಿತು ಭರವಸೆ ನೀಡಿದ್ದಾರೆ .

ಉಪ್ಪಳ ಹಾಗೂ ಪರಿಸರದಲ್ಲಿ ಗೂಂಡಾ ಹಾವಳಿ ಹಾಗೂ ಅಹಿತಕರ ಘಟನೆ ಆಗಾಗ ನಡೆಯುತ್ತಿರುವ ಹಿನ್ನಲೆಯಲ್ಲಿ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆ ಗಳನ್ನು  ವಿಭಜಿಸಿ ಉಪ್ಪಳದಲ್ಲಿ ನೂತನ ಠಾಣೆ ಆರಂಭಿಸುವ ನಿಟ್ಟಿನಲ್ಲಿ ಕ್ರಮ ತೆಗದುಕೊಳ್ಳಲಾಗಿದೆ ಎಂದು  ಮುಖ್ಯಮಂತ್ರಿ ಹೇಳಿದರು.

ಸ್ಥಳ ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಆದೇಶ ನೀಡಲಾಗಿತ್ತು. ವರದಿ ಪರಿಶೀಲಿಸಿದ ಬಳಿಕ  ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಉಪ್ಪಳ ಕೇಂದ್ರೀಕರಿಸಿ ನಡೆಯುತ್ತಿರುವ ದುಷ್ಕ್ರತ್ಯ , ಗಾಂಜಾ ಮಾರಾಟ,, ಸುಲಿಗೆ , ದರೋಡೆ ಮೊದಲಾದ ಕಾರಣಗಳಿಂದ  ಉಪ್ಪಳ ದಲ್ಲಿ  ಪೊಲೀಸ್ ಠಾಣೆ  ಆರಂಭಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ  ಕೇಳಿಬರುತ್ತಿದ್ದು , ಸರಕಾರ ಸ್ಪಂದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News