×
Ad

ಹೆಲ್ಪ್ ಇಂಡಿಯಾ ಫೌಂಡೇಶನ್‌ನಿಂದ ಸಂವೇದನಾ ಮಕ್ಕಳ ಮನೆಗೆ ಊಟೋಪಚಾರ

Update: 2016-10-29 17:32 IST

ಮಂಗಳೂರು,ಅ.29: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಮಂಗಳೂರಿನ ಮರೋಳಿಯಲ್ಲಿರುವ ಸಂವೇದನಾ ಮಕ್ಕಳ ಮನೆಗೆ ದೀಪಾವಳಿ ಪ್ರಯುಕ್ತ ಮಧ್ಯಾಹ್ನದ ಊಟೋಪಚಾರವನ್ನು ಒದಗಿಸಲಾಯಿತು. ಸುಮಾರು 50 ರಿಂದ 65ರಷ್ಟು ಮಕ್ಕಳ ಜೊತೆ ಹೆಲ್ಪ್ ಇಂಡಿಯಾ ಫೌಂಡೇಶನ್‌ನಿನ ಸದಸ್ಯರು ದೀಪಾವಳಿ ಹಬ್ಬದ ಖುಷಿಯನ್ನು ಹಂಚಿಕೊಂಡರು. ಸಾಮಾಜಿಕ ಸಾಮರಸ್ಯ, ಪೀಡಿತರಿಗೆ ನೆರವಾಗುವ ಉದ್ದೇಶದಿಂದ ಫೌಂಡೇಶನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದುರ್ಬಲರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನೂ ಫೌಂಡೇಶನ್ ಇಟ್ಟುಕೊಂಡಿದೆ. ಈ ಕಾರ್ಯಕ್ರಮವು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಕಾದರ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಾ.ದೇವದಾಸ್ ಹೆಗ್ಡೆ, ರವೀದ್ರ ಶೆಟ್ಟಿ ಉಳಿತೊಟ್ಟು (ರಾಜ್ಯ ಕಾರಿಕರಿಣಿ ಬಿಜೆಪಿ ಸದಸ್ಯ), ಡಾ.ಪ್ರಕಾಶ್ ಶೆಟ್ಟಿ, ಸಂಪತ್ತ್ ಮಡೂರ್, ರಾಹುಲ್ ಮರೋಳಿ, ಉದ್ಯಮಿ ಬಶೀರ್ ಮೇಘಾಪ್ಲಾಝಾ, ಚಂದ್ರಾಸ ರೈ ಪಿಲಾರ್, ಮಜೀದ್ ಸುರಲ್ಪಾಡಿ (ಅಖಿಲ ಭಾರತ, ಬ್ಯಾರಿ ಪರಿಷತ್‌ನ ಅಧ್ಯಕ್ಷ), ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಟ್ರಸ್ಟಿ ಇಸ್ಮಾಈಲ್ ರಿಯಲ್ ಟೆಕ್, ಯಾಸೀರ್ ವೆಸ್ಟ್‌ಲೇನ್, ಪತ್ರಿಕಾ ಕಾರ್ಯದರ್ಶಿ ಝಾಕಿರ್ ಹುಸೈನ್ ಇಖ್ಲಾಸ್, ಸಿರಾಜ್ ಅಬಾಯ ಫ್ಯಾಶನ್, ಉಳ್ಳಾಲ ಮೇಲಂಗಡಿ ಕೌನ್ಸಿಲರ್ ಮುಸ್ತಫಾ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು ಹಾಗೂ ಸಂವೇದನಾ ಮಕ್ಕಳ ಮನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News