ಕಾಸರಗೋಡು:ಬಹುಭಾಷಾ ಸಂಗಮ ಕಾರ್ಯಕ್ರಮ
ಕಾಸರಗೋಡು,ಅ.29 : ಗ್ರಂಥಾಲಯಗಳು ಆಧುನಿಕತೆಗೆ ಹೊಂದಿಕೊಂಡು ಮುಂದುವರಿಯಬೇಕಿದೆ. ಗ್ರಂಥಾಲಯ ಗಳನ್ನು ಜನಪರಗೊಳಿಸಿದ ಹಿರಿಮೆ ಕೇರಳ ರಾಜ್ಯಕ್ಕೆ ಸಂದಾಯವಾಗುತ್ತಿದೆ ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅಭಿಪ್ರಾಯಪಟ್ಟರು.
ಅವರು ಕಾಸರಗೋಡು ಜಿಲ್ಲಾ ಗ್ರಂಥಾಲಯ ಅಲ್ಪಸಂಖ್ಯಾತ ಭಾಷಾ ವಿಭಾಗದ ವತಿಯಿಂದ ಬಹುಭಾಷಾ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಜಿಲ್ಲಾ ಗ್ರಂಥಾಲಯ ಕಾರ್ಯದರ್ಶಿ ಪಿ . ವಿ ಕೆ ಪನಯಾಲ್ ಉದ್ಘಾಟಿಸಿದರು.
ಜಿಲ್ಲಾ ಗ್ರಾಥಾಲಯ ಸಮಿತಿ ಅಧ್ಯಕ್ಷ ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು.
ಅಬ್ದುಲ್ ಖಾದಿರ್, ವಿನೋದ್ ಕುಮಾರ್ ಪೆರಂಬಳ, ಯು. ಶ್ಯಾಮ್ ಭಟ್ , ಎಚ್ . ಎ ಮುಹಮ್ಮದ್ ಮಾಸ್ಟರ್ , ಡಿ . ಕಮಲಾಕ್ಷ ಮೊದಲಾದವರು ಮಾತನಾಡಿದರು.
ಆಶಾ ದಿಲೀಪ್, ಚೇತನ್ ಕುಂಬಳೆ , ರಮ್ಯಾ ವಿನೋದ್ ಕುಮಾರ್ ಸ್ವರಚಿತ ಕವನಗಳನ್ನು ವಾಚಿಸಿದರು.
ಮಂಜೇಶ್ವರ ತಾಲೂಕು ಗ್ರಂಥಾಲಯ ಸಮಿತಿ ಅಧ್ಯಕ್ಷ ಎಸ್ . ನಾರಾಯಣ ಭಟ್ ಸ್ವಾಗತಿಸಿ, ಅಹಮ್ಮದ್ ಹುಸೈನ್ ಪಿ . ಕೆ ವಂದಿಸಿದರು.