×
Ad

ಮದ್ಯದಂಗಡಿ ಪ್ರಾರಂಭಿಸುವುದರ ವಿರುದ್ಧ ಹೋರಾಟ

Update: 2016-10-29 20:01 IST

ಕಾಸರಗೋಡು,ಅ. 29 :  ಕಾಸರಗೋಡು ನಗರ ಹೊರವಲಯದ ಅಣಂಗೂರಿನಲ್ಲಿ  ಸರಕಾರದ ಸ್ವಾಮ್ಯದ  ಬಿವರೇಜಸ್  ಮದ್ಯದಂಗಡಿ ತೆರೆಯುವುದರ ವಿರುದ್ಧ  ನಾಗರಿಕರು ಹೋರಾಟಕ್ಕೆ ದುಮುಕಿದ್ದು, ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. 

ಜನವಾಸ ಪ್ರದೇಶವಾದ ಇಲ್ಲಿ ಯಾವುದೇ ಕಾರಣಕ್ಕೂ   ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮಹಿಳೆಯರು, ಮಕ್ಕಳು , ಹಿರಿಯರು ಹಿರಿಯರು ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬುಧವಾರದಿಂದ ಮದ್ಯದಂಗಡಿ ಕಾರ್ಯಾರಂಭಗೊಳ್ಳಬೇಕಿತ್ತು.  ಮದ್ಯ ಸಹಿತ ಬಂದ ಲಾರಿಯನ್ನು ತಡೆದ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇದರಿಂದ ಮದ್ಯದಂಗಡಿ ತೆರೆಯಲು ಸಾಧ್ಯವಾಗಲಿಲ್ಲ.

ಕಾಸರಗೋಡು ನಗರದ  ಐ .ಸಿ ಭಂಡಾರಿ ರಸ್ತೆಯಲ್ಲಿರುವ ಮದ್ಯದಂಗಡಿಯನ್ನು  ನಗರ ಹೊರವಲಯದ ಅಣಂಗೂರಿನ ಜನವಾಸ ಕೇಂದ್ರಕ್ಕೆ ವರ್ಗಾಯಿಸರುವುದು ಇದೀಗ ಅಣಂಗೂರು ನಿವಾಸಿಗಳ ನಿದ್ದೆಗೆಡಿಸಿದೆ. ಅಣಂಗೂರು ತಾಲೂಕು ಆಸ್ಪತ್ರೆಯಿಂದ  ೫೦  ಮೀಟರ್ ನಷ್ಟು ದೂರದಲ್ಲಿ  ಮದ್ಯದಂಗಡಿ ತೆರೆಯಲಾಗುತ್ತಿದ್ದು, ಪರಿಸರದಲ್ಲಿ ೩೦೦ ರಷ್ಟು ಮನೆಗಳಿವೆ.

 ದೇವಸ್ಥಾನ , ಪರಿಶಿಷ್ಟ ಪಂಗಡಸ ಹೆಣ್ಮಕ್ಕಳ  ವಸತಿ ನಿಲಯ , ಅಂಗವಾಡಿ ಮೊದಾಲಾದವು ಪರಿಸರದಲ್ಲಿದೆ.  ನೂರಾರು ವಿದ್ಯಾರ್ಥಿನಿಗಳು, ಹೆಣ್ಮಕ್ಕಳು , ಮಹಿಳೆಯರು  ಈ ದಾರಿಯಾಗಿ ತೆರಳುತ್ತಿದ್ದಾರೆ.  ಮದ್ಯದಂಗಡಿ ತೆರೆಯುದರಿಂದ ಭೀತಿಯಲ್ಲೇ ಇವರು ನಡೆದಾಡಬೇಕಾದ ಸ್ಥಿತಿ ಉಂಟಾಗಲಿದೆ. ಇದರಿಂದ ಮದ್ಯದಂಗಡಿ ವಿರುದ್ಧ ನಾಗರಿಕರು ಹೋರಾಟ ಸಮಿತಿ ರಚಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಅಬಕಾರಿ ಸಚಿವ , ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು , ಪರಿಶೀಲಿಸುವ ಭರವಸೆ ಲಭಿಸಿದೆ. ಆದರೆ  ನಮ್ಮ ಬೇಡಿಕೆ ಈಡೇರಿಕೆ  ಮುಂದಾಗಿಲ್ಲ .  ಇದರಿಂದ  ಹೋರಾಟ ನಡೆಸುತ್ತಿರುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ .

ಕಾಸರಗೋಡು ಶಾಸಕ ಎನ್. ಏ  ನೆಲ್ಲಿಕುನ್ನು ಪ್ರತಿಭಟನೆಗೆ  ಬೆಂಬಲ ಸೂಚಿಸಿದ್ದು,  ಮದ್ಯದಂಗಡಿ ತೆರೆಯದಂತೆ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಗಂಜಿ ಬೇಯಿಸುವ ಮೂಲಕ ಶಾಸಕ ನೆಲ್ಲಿಕುನ್ನು ರವರು ಹೋರಾಟಕ್ಕೆ ಬೆಂಬಲಿ ಸೂಚಿಸಿದರು 

ಯಾವುದೇ ಕಾರಣಕ್ಕೂ  ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ. ಹೋರಾಟ ವನ್ನು ಮತ್ತಷ್ಟು ತೀವ್ರಗೊಳಿಸಲು   ಸಮಿತಿ ಮುಂದಾಗಿದೆ

ಹೋರಾಟ ಸಮಿತಿ  ಸಂಚಾಲಕ ಎ . ಸತೀಶ್ , ಕುಂಞ ಕೃಷ್ಣನ್  ಮಾಸ್ಟರ್ , ವೇಣು ಕಣ್ಣನ್ , ಸಜಿ ಮ್ಯಾಥ್ಯೂ,  ಜಾನಕಿ  ಹೋರಾಟಕ್ಕೆ ನೇತೃತ್ವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News