×
Ad

ಕಾಸರಗೋಡು: ಮೆಣಸಿನ ಹುಡಿ ಎರಚಿ ವ್ಯಕ್ತಿಯ ಕೊಲೆಯತ್ನ

Update: 2016-10-30 08:50 IST

ಕಾಸರಗೋಡು, ಅ.30: ವ್ಯಕ್ತಿಯೋರ್ವರ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ನಗರ ಹೊರ ವಲಯದ  ಟಿ.ವಿ. ಸ್ಟೇಷನ್ ಮೆಹಬೂಬ್ ರಸ್ತೆಯ  ಮೋಹನ್ ದಾಸ್ (45) ಹಲ್ಲೆಗೊಳಗಾದವರು. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಗೆ ನುಗ್ಗಿದ ಇಬ್ಬರು  ಮೆಣಸಿನ ಹುಡಿ ಎರಚಿ ಬಳಿಕ ಮಾರಕಾಯುಧದಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು  ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆಸ್ತಿ ವಿವಾದ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಕಾಸರಗೋಡು ನಗರ  ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News