ಬಿಜೆಪಿ ಕಾರ್ಯಕರ್ತನ ಸ್ಕೂಟರ್ ಬೆಂಕಿಗಾಹುತಿ
Update: 2016-10-30 10:46 IST
ಕಾಸರಗೋಡು, ಅ.30: ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಬಿಜೆಪಿ ಕಾರ್ಯಕರ್ತರೋರ್ವರ ಸ್ಕೂಟರೊಂದು ಅಗ್ನಿಗಾಹುತಿಯಾದ ಘಟನೆ ಉದುಮದಲ್ಲಿ ರವಿವಾರ ಮುಂಜಾನೆ ನಡೆದಿದೆ.
ಉದುಮ ಏರೋಲ್ ಕೆರೆ ಮೂಲೆಯ ಅನಿಲ್ ಕುಮಾರ್ ಎಂಬವರ ಸ್ಕೂಟರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮುಂಜಾನೆ ಶಬ್ದ ಕೇಳಿ ಮನೆಯವರು ಹೊರಬಂದಾಗ ಸ್ಕೂಟರ್ ಉರಿಯುತ್ತಿರುವುದು ಕಂಡು ಬಂದಿದೆ. ಕಿಡಿಗೇಡಿಗಳ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದೆ.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.