ಭಾರತದ ರಾಯಭಾರಿ ಸುರ್ಜಿತ್‌ ಸಿಂಗ್ ಪಾಕ್ ನಿಂದ ಸ್ವದೇಶಕ್ಕೆ ವಾಪಸ್

Update: 2016-10-30 05:37 GMT

ಇಸ್ಲಾಮಾಬಾದ್, ಅ.30: ಪಾಕಿಸ್ತಾನದ ಕೆಂಗೆಣ್ಣಿಗೆ ಗುರಿಯಾಗಿರುವ ಭಾರತದ ರಾಯಭಾರಿ ಸುರ್ಜಿತ್ ಸಿಂಗ್ ಅವರು ಶನಿವಾರ ಪಾಕಿಸ್ತಾನವನ್ನು ತೊರೆದು ಸ್ವದೇಶಕ್ಕೆ ಆಗಮಿಸಿದ್ದಾರೆಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುವ ಮೂಲಕ ಬೇಹುಗಾರಿಕೆ ಮಾಡುತ್ತಿದ್ದಾರೆಂಬ ಆರೋಪದಲ್ಲಿ ದಿಲ್ಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ದಿಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿತ್ತು.  ಈ ವೇಳೆ ಸಿಕ್ಕಿ ಬಿದ್ದಿದ್ದ ಅಧಿಕಾರಿ ಪಾಕ್ ನ ಮೊಹಮ್ಮದ್ ಅಖ್ತರ್ ನನ್ನು ಭಾರತವನ್ನು  ತೊರೆಯುವಂತೆ ಆದೇಶ ನೀಡಲಾಗಿತ್ತು.  ಇದಕ್ಕೆ ಪ್ರತಿಯಾಗಿ ರಾಯಭಾರಿ ಸುರ್ಜಿತ್‌ ಸಿಂಗ್‌ ಅವರಿಗೆ ಪಾಕಿಸ್ತಾನವನ್ನು ತೊರೆಯುವಂತೆ ಪಾಕಿಸ್ತಾನ ಹುಕುಂ ಜಾರಿಗೊಳಿಸಿತ್ತು.
ಭಾರತ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿರುವ ಆರೋಪವನ್ನು ಭಾರತದ ಮೇಲೆ ಹೊರಿಸಿದ ಪಾಕಿಸ್ತಾನ ಭಾರತದ ರಾಯಭಾರಿಗಳಿಗೆ  48 ಗಂಟೆಯೊಳಗಾಗಿ ಪಾಕಿಸ್ತಾನ ತೊರೆಯುವಂತೆ ಎಚ್ಚರಿಕೆ ನೀಡಿತ್ತು. ಈ ಕಾರಣಕ್ಕಾಗಿ ಸುರ್ಜಿತ್‌ ಸಿಂಗ್‌ ಪಾಕಿಸ್ತಾನದಿಂದ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News