ಬೀದಿನಾಯಿಗಳನ್ನು ಕೊಲ್ಲುವ ಪಂಚಾಯತ್ ಅಧ್ಯಕ್ಷರಿಗೆ ಬಹುಮಾನ ಘೋಷಣೆ

Update: 2016-10-30 06:07 GMT

ಕೋಟ್ಟಯಂ,ಅ. 30: ದಾಳಿ ಮಾಡುವ ಬೀದಿನಾಯಿಗಳನ್ನು ಕೊಲ್ಲುವ ಯೋಜನೆ ರೂಪಿಸುವ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚಿನ್ನದ ನಾಣ್ಯ, ಶಾಲು ಬಹುಮಾನ ನೀಡುವುದಾಗಿ ಪಾಲಾ ಸೈಂಟ್ ಥಾಮಸ್ ಕಾಲೇಜ್ ಹಳೆವಿದ್ಯಾರ್ಥಿ ವೆಲ್ಫೇರ್ ಅಸೋಸಿಯೇಶನ್ ಘೋಷಿಸಿದೆ ಎಂದು ವರದಿಯಾಗಿದೆ.

 ಈಹಿಂದೆಯೂ ಇವರು ಕೆಲವು ಘೋಷಣೆ ಮಾಡಿದ್ದರು. ಬೀದಿನಾಯಿಗಳನ್ನು ಎದುರಿಸಲು ಸಬ್ಸಿಡಿ ದರದಲ್ಲಿ ಕೋವಿಗಳನ್ನು ನೀಡುವೆವೆಂದು ಘೋಷಿಸಿದ್ದು ಅದರಲ್ಲೊಂದು ಕೊಡುಗೆಯಾಗಿದೆ.ಹಲವಾರು ಮಂದಿಗೆ ಇವರು ಇತರ ಸೌಲಭ್ಯಗಳನ್ನುಕೂಡಾ ಕಲ್ಪಿಸಿದ್ದರು. ಹೆಚ್ಚು ಬೀದಿನಾಯಿಗಳನ್ನು ಕೊಲ್ಲಿಸುವ ಪಂಚಾಯತ್‌ಗಳಿಗೆ ತಮ್ಮ ವತಿಯಿಂದ ಚಿನ್ನದನಾಣ್ಯ ಬಹುಮಾನವಿದೆ ಎಂದು ಈ ಸಂಘಟನೆ ಹೇಳಿಕೊಂಡಿದೆ. ಕನಿಷ್ಠ 25 ಬೀದಿ ನಾಯಿಗಳನ್ನು ಕೊಲ್ಲಿಸುವ ಪಂಚಾಯತ್ ಅಧ್ಯಕ್ಷರುಗಳಿಗೆ ಪ್ರೋತ್ಸಾಹ ಬಹುಮಾನಗಳನ್ನು ಕೂಡಾ ನೀಡುವೆವೆಂದು ಸಂಘಟನೆ ಘೋಷಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News