ಟೆಸ್ಟ್‌ರೈಡ್‌ಗೆ ಪಡೆದಾತ 25 ಲಕ್ಷ ದ ಕಾರಿನೊಂದಿಗೆ ಪರಾರಿ

Update: 2016-10-30 06:18 GMT

ಹೈದರಾಬಾದ್,ಅ. 30: ವೈದ್ಯರ ಸೋಗಿನಲ್ಲಿ ಬಂದ ವಂಚಕನೊಬ್ಬ ಇಲ್ಲಿನ ಹಳೆಯ ಕಾರು ಮಾರಟಗಾರೊಬ್ಬರಿಂದ ಟೆಸ್ಟ್ ಡ್ರೈವ್ ನೆಪದಲ್ಲಿ ಲಗ್ಝುರಿ ಕಾರನ್ನು ಪಡೆದು ಪರಾರಿಯಾದ ಘಟನೆ ವರದಿಯಾಗಿದೆ. ಬಂಜಾರ ಹಿಲ್ಸೆ ಪೊಲೀಸ್ ಠಾಣೆ ನಿರೀಕ್ಷಕ ಕೆ.ಶ್ರೀನಿವಾಸ್ ತಿಳಿಸಿರುವ ಪ್ರಕಾರ ಸುಮಾರು ಮೂವತ್ತೈದು ವಯಸ್ಸಿನ ವ್ಯಕ್ತಿ ಗೌತಮ್ ರೆಡ್ಡಿಯೆಂದು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಅಪೋಲೊ ಆಸ್ಪತ್ರೆಯಲ್ಲಿ ವೈದ್ಯನೆಂದು ತಿಳಿಸಿದ್ದಾನೆ. ಇಲ್ಲಿನ ಶ್ರೀನಗರ ಕಾಲನಿಯ ನಾನಿಕೋರ್ಸ್‌ಶೋರೂಂನಲ್ಲಿ ಆಡಿಕಾರು ಖರೀದಿಸುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಟೆಸ್ಟ್‌ರೈಡ್‌ಗಾಗಿ ಡೀಲರ್‌ನಿಂದ ಸುಮಾರು 25 ಲಕ್ಷರೂಪಾಯಿ ಮೌಲ್ಯದ ಆಡಿಕ್ಯೂ3 ಕಾರನ್ನು ಟೆಸ್ಟ್ ರೈಡ್‌ಗಾಗಿ ಕೇಳಿದ್ದಾನೆ. ಶೋರೂಮ್ ಮಾಲಕ ಆಕಾರಿನ ಕೀಕೊಟ್ಟು ತನ್ನೊಬ್ಬ ನೌಕರನನ್ನು ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.

ಅಪೋಲೊ ಆಸ್ಪತ್ರೆಯ ಬಳಿಹೋದಾಗ ಆರೋಪಿ ತನ್ನ ಜೊತೆಗಿದ್ದ ಶೋರೂಮ್ ನೌಕರನನ್ನು ಕಾರಿನಿಂದ ಇಳಿಯಲು ವಿನಂತಿಸಿದ್ದಾನೆ. ಆಸ್ಪತ್ರೆಯ ಒಳಗೆ ಕೊಂಡೊಯ್ದು ತನ್ನ ಮಿತ್ರನಿಗೆ ಕಾರು ತೋರಿಸಬೇಕು ಎಂದಿದ್ದಾನೆ. ನೌಕರ ಕಾರಿನಿಂದ ಇಳಿದಕೂಡಲೇ ಕಾರನ್ನು ಆಸ್ಪತ್ರೆಯ ಒಳಭಾಗದತ್ತ ಕೊಂಡೊಯ್ದಿದ್ದು ಆಮೇಲೆ ಮರಳಿ ಬಂದಿರಲಿಲ್ಲ. ನೌಕರ ಕಾದು ಸುಸ್ತಾಗಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಘಟನೆಯ ಕುರಿತು ಪ್ರಕರಣದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮೊದಲು ಕೂಡಾ ಹೈದರಾಬಾದ್‌ನಲ್ಲಿ ಇಂತಹ ಘಟನೆಗಳು ನಡೆದಿದ್ದವು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News