ಬೀದಿನಾಯಿ ಉಪಟಳ ನಿಯಂತ್ರಿಸಲು ನಮ್ಮ ಬಳಿ ಹಣವಿಲ್ಲ: ಕೇಂದ್ರ ಪ್ರಾಣಿರಕ್ಷಣಾ ಮಂಡಳಿ

Update: 2016-10-30 07:18 GMT

ಹೊಸದಿಲ್ಲಿ,ಅ. 30: ಬೀದಿನಾಯಿ ಉಪಟಳಗಳನ್ನು ನಿಯಂತ್ರಿಸುವ ಮಾರ್ಗಸೂಚಿಯನ್ನು ಜಾರಿಗೆ ತರಲು ನಮ್ಮ ಬಳಿ ಹಣವಿಲ್ಲ ಅದಕ್ಕಾಗಿ ವಿಶೇಷ ಫಂಡ್ ನೀಡಬೇಕೆಂದು ಕೇಂದ್ರ ಪ್ರಾಣಿರಕ್ಷಣಾ ಮಂಡಳಿ ಕೇಂದ್ರ ಅರಣ್ಯಮತ್ತು ಪರಿಸರಸಚಿವಾಲಯ ಕರೆದ ಸಭೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ. ಗರ್ಭನಿರೋಧ ಪ್ರಕ್ರಿಯೆಯುಕಠಿಣವಾಗಿ ಜಾರಿಗೆ ತಂದರೆ ಮಾತ್ರವೇ ಕೇರಳದ ಬೀದಿನಾಯಿ ಉಪಟಳ ಪರಿಹರಿಸಲುಸಾಧ್ಯವಿದೆ ಎಂದು ಸಭೆಯಲ್ಲಿ ನಿರ್ಧಾರವಾಗಿದೆ. ಬೀದಿನಾಯಿ ತೊಂದರೆ ಪರಿಹರಿಸಲು ಯಾವ ಕ್ರಮಕೈಗೊಳ್ಳಬೇಕು ಎಂದು ತಿಳಿಸಬೇಕೆಂದು ಸುಪ್ರೀಂಕೋರ್ಟು ಪ್ರಾಣಿರಕ್ಷಣಾಮಂಡಳಿ ಮತ್ತು ಕೇಂದ್ರ ಪರಿಸರ ಸಚಿವಾಲಯವನ್ನು ಕೇಳಿತ್ತು. ಇದಕ್ಕೆ ಸಂಬಂಧಿಸಿ ಶುಕ್ರವಾರ ಸಚಿವಾಲಯ ವಿಶೇಷ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ಕರೆದಿತ್ತು. ಪ್ರಾಣಿರಕ್ಷಣಾ ಮಂಡಳಿಯ ಅಧ್ಯಕ್ಷ ಡಾ. ಆರ್.ಎಂ.ಕರ್ಬುಮತ್ತು ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಬೀದಿನಾಯಿಗಳಿಗೆ ಗರ್ಭನಿರೋಧ, ವಿಶೇಷ ಸಾಕಣಾ ಕೇಂದ್ರಗಳನ್ನು ಸ್ಥಾಪಿಸುವುದು. ನಾಯಿಗಳಿಂದ ದಾಳಿಗೊಳಗಾದವರಿಗೆ ವೈದ್ಯಕೀಯ ಸಹಾಯ ಒದಗಿಸುವುದು. ನಷ್ಟ ಪರಿಹಾರ ಮುಂತಾದ ಸೂಚನೆಗಳು ಸಭೆಯಲ್ಲಿ ಮಂಡಿಸಲಾಗಿದೆ.

 ಬೀದಿ ನಾಯಿ ಉಪಟಳ ಪರಿಹರಿಸಲಿಕ್ಕಾಗಿ ಮಾರ್ಗಸೂಚಿ ತಯಾರಿಸಲು ಅದನ್ನು ಜಾರಿಗೆ ತರಲು ಹಣವಿಲ್ಲದಿರುವುದು ಬಹುದೊಡ್ಡ ಅಡ್ಡಿಯಾಗಿದೆ ಎಂದು ಮಂಡಳಿ ಸದಸ್ಯರು ಹೇಳಿದ್ದಾರೆ. ಈ ವಿಷಯದಲ್ಲಿ ಹಣಕಾಸು ಸಚಿವಾಲಯದಿಂದ ಸಲಹೆ ಕೇಳಲು ನಿರ್ಧರಿಸಲಾಗಿದೆ. ವೈಜ್ಞಾನಿಕ ಪರಿಹಾರ ಸಾಧ್ಯವಿರುವ ವಿಷಯವನ್ನು ಕೇರಳದಲ್ಲಿ ವಿವಾದದ ವಿಷಯವಾಗಿ ಮಾಡಲಾಗಿದೆ ಎಂದು ಪ್ರಾಣಿ ರಕ್ಷಣಾಮಂಡಳಿ ಸದಸ್ಯೆ ಅಂಜಲಿ ಶರ್ಮ ಆರೋಪಿಸಿದ್ದಾರೆ. ಕೊಚ್ಚೌಸೇಪ್ಪ್ ಚಿಟ್ಟಿಲಪಳ್ಳಿ, ಜೋಸ್ ಮಾವೇಲಿ ಜನರಲ್ಲಿ ಈಕುರಿತು ಅನಗತ್ಯ ಬೆದರಿಕೆ ಸೃಷ್ಟಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News