ಮಾದಕ ವಸ್ತುಗಳ ವಿರುದ್ಧ ಜಾಗೃತಿಗೆ ವಿದ್ಯಾರ್ಥಿಗಳ ವಿಭಿನ್ನ ಪ್ರಯತ್ನ

Update: 2016-10-30 07:31 GMT

ಕಾಸರಗೋಡು, ಅ.30:  ಹೊಸ ತಲೆಮಾರನ್ನು ಮದ್ಯ - ಮಾದಕ ವಸ್ತುಗಳ ಸೇವನೆಯಿಂದ  ಪೋಷಕರನ್ನು ಮುಕ್ತಿಗೊಳಿಸುವ ನಿಟ್ಟಿನಲ್ಲಿ ಕೇರಳ - ಕರ್ನಾಟಕ ಗಡಿ ಪ್ರದೇಶದ ಶಾಲಾ ವಿದ್ಯಾರ್ಥಿಗಳು ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿದ್ದು , ಮುಂದಿನ ತಿಂಗಳಾತ್ಯದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

'ಮೀರಾ' ಎಂಬ ಹೆಸರಿನ ಸಾಕ್ಷ್ಯ ಚಿತ್ರ  ದೇಲಂಪಾಡಿ ಗ್ರಾಮದ ಕುಗ್ರಾಮವಾದ ಅಡೂರು ಪಾಂಡಿಯ ಸರಕಾರಿ ಹಯರ್ ಸೆಕಂಡರಿ ಶಾಲೆಯ  ಮಕ್ಕಳು  ಮತ್ತು ಶಾಲಾ ಶಿಕ್ಷಕರ , ನಾಗರಿಕರ, ಸಂಘ ಸಂಸ್ಥೆಗಳ  ಪ್ರಯತ್ನದಿಂದ ಮೂಡಿ ಬಂದಿದೆ. 30 ನಿಮಿಷಗಳ ಈ ಸಾಕ್ಷ ಚಿತ್ರ   ದುಶ್ಚಟ ಹೊಂದಿರುವ ಕುಟುಂಬದ ದುಸ್ಥಿತಿಯನ್ನು ತೆರೆದಿಡುತ್ತಿದೆ.

ಕುಟುಂಬದಲ್ಲಿ ಹೆಚ್ಚುತ್ತಿರುವ ಮದ್ಯ - ಮಾದಕ ವಸ್ತುಗಳ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ  ಸಾಕ್ಷ ಚಿತ್ರ ನಿರ್ಮಾಣಗೊಂಡಿದ್ದು , ಇದು ಪೋಷಕರಿಗೆ ಸಂದೇಶ ನೀಡುತ್ತಿದೆ. ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಉತ್ತಮ ಸಮಾಜದ ಸಂದೇಶದೊಂದಿಗೆ ದುಶ್ಚಟ ಗಳಿಂದ  ಕುಟುಂಬ , ಸಮಾಜವನ್ನು ಪಾರು ಮಾಡುವ ಉದ್ದೇಶದಿಂದ  ಪಾಂಡಿ  ಹಿರಿಮೆ ಎಂಬ ಅಧ್ಯಾಪಕರ ಒಕ್ಕೂಟ  ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.  ಇಂದಿನ ದಿನಗಳಲ್ಲಿ ಕಂಡು ಬರುತ್ತಿರುವ  ಮದ್ಯ - ಮಾದಕ ವಸ್ತುಗಳ ಚಟಕ್ಕೆ ಹಿರಿಯರು , ಯುವಕರು ಬಲಿಯಾಗುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿಪಾಲಾಗುತ್ತಿದೆ. ಮಹಿಳೆಯರು , ಮಕ್ಕಳು  ಇದರಿಂದ ನಲುಗುತ್ತಿದ್ದಾರೆ.  ಇದರ ವಿರುದ್ಧ ಮೂಡಿಸುವ ನಿಟ್ಟಿನಲ್ಲಿ ಚಿತ್ರ ನಿರ್ಮಾಣಗೊಂಡಿದ್ದು,  ಕೇವಲ  ಒಂದು ವಾರದಲ್ಲೇ ಈ ಚಿತ್ರ ನಿರ್ಮಾಣ ಪೂರ್ಣಗೊಳಿಸಲಾಗಿದೆ.

 ವಿಜಯನ್ ಶಂಕ್ರಪಾಡಿ ಎಂಬವರ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಹಗಲು ಮಾತ್ರವಲ್ಲ ರಾತ್ರಿ ದ್ರಶ್ಯವನ್ನು  ಕೂಡಾ ಈ ಚಿತ್ರ ಚಿತ್ರೀಕರಿಸಲಾಗಿದೆ. ಉಭಯ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಮಕ್ಕಳ ಪಾತ್ರದಲ್ಲಿ ಎರಡನೇ ತರಗತಿಯ ಅಭಿರಾಜ್, ಆರನೇ ತರಗತಿಯ ಆರತಿ, ತಾಯಿ ಜಾನಕಿ ಪಾತ್ರದಲ್ಲಿ ಶಿಕ್ಷಕಿ  ಅಂಜಲಿ  ಅಭಿನಯಿಸಿದ್ದಾರೆ. ಇವರಲ್ಲದೆ ರಜನಿ ಸೋನಿ , ರಂಜಿತ್ ಪೆರ್ಲ ನಟಿಸಿದ್ದು  ಶಾಲಾ ಪ್ರಾಂಶುಪಾಲ ವಿ. ರಾಜು ,   ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ  ದಿವಾಕರ , ಈಶ್ವರ ನಾಯ್ಕ್, ನಜ್ಮುನ್ನಿಸಾ, ರೇಖಾ ಸ್ಮಿತಾ, ಪ್ರಶಾಂತ್ ರೋಹಿತ್, ಕೃಷ್ಣಪ್ಪ ಹಾಗೂ ಶಾಲಾ ಶಿಕ್ಷಕರು  ನೆರವಾಗಿದ್ದು, ಒಂದು ಲಕ್ಷ ರೂ. ಚಿತ್ರ ನಿರ್ಮಾಣಕ್ಕೆ ವೆಚ್ಚವಾಗಿದ್ದು, ಸಂಘ ಸಂಸ್ಥೆಗಳು , ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು  ಸಹಕಾರ ನೀಡಿದ್ದಾರೆ.

ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಎಲ್ಲಾ ಶಾಲೆಗಳಲ್ಲಿ ಹಾಗೂ ಪರಿಸರದಲ್ಲಿ ಪ್ರದರ್ಶನ ಮಾಡುವ ನಿಟ್ಟಿನಲ್ಲಿ  ಗಮನಹರಿಸಿದ್ದು, ಪೊಲೀಸ್ , ಅಬಕಾರಿ,  ಶಿಕ್ಷಣ  ಇಲಾಖೆಗಳ ನೆರವು ಪಡೆದು, ರಾಜ್ಯವ್ಯಾಪಿ  ಪ್ರದರ್ಶನ ನಡೆಸುವ ನಿಟ್ಟಿನಲ್ಲಿ  ಚಿಂತನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News