ಉಡುಪಿ: ಕರವೇ ಕಾರ್ಯಕರ್ತರ ಬಂಧನ
Update: 2016-10-30 13:04 IST
ಉಡುಪಿ, ಅ.30: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉಡುಪಿ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೊಲೀಸರು ಇಂದು ಮಧ್ಯಾಹ್ನ ವೇಳೆ ಬಂಧಿಸಿದರು.
ವೇದಿಕೆಯ ಜಿಲ್ಲಾ ಮುಖಂಡ ಅನ್ಸಾರ್ ಅಹ್ಮದ್ ಸೇರಿದಂತೆ ಆರೇಳು ಕಾರ್ಯಕರ್ತರನ್ನು ಅಜ್ಜರಕಾಡಿನಲ್ಲಿ ಬಂಧಿಸಿದ ಪೊಲೀಸರು ಉಡುಪಿಯ ಚಂದು ಮೈದಾನದಲ್ಲಿರುವ ಸಶಸ್ತ್ರ ಮೀಸಲು ಪಡೆಯ ಕೇಂದ್ರದಲ್ಲಿ ಇರಿಸಿ ದ್ದಾರೆಂದು ಮೂಲಗಳು ತಿಳಿಸಿವೆ.