ಕುರುಕ್ಷೇತ್ರದಲ್ಲಿ ವೀರಯೋಧನಿಗೆ ಅಂತಿಮ ನಮನ; ಆ ಊರಲ್ಲಿ ದೀಪಾವಳಿ ಇಲ್ಲ

Update: 2016-10-30 07:40 GMT

ಹೊಸದಿಲ್ಲಿ, ಅ.30: ಗಡಿಯಲ್ಲಿ ವೀರಮರಣವನ್ನಪ್ಪಿರುವ ಯೋಧ ಮನ್ ದೀಪ್ ಸಿಂಗ್ ಅವರ ಮೃತದೇಹದ ಅಂತ್ಯಕ್ರಿಯೆ ಅವರ ಹುಟ್ಟೂರು ಹರ್ಯಾಣದ  ಕುರುಕ್ಷೇತ್ರದಲ್ಲಿ  ಸಕಲ ಸರಕಾರಿ ಮತ್ತು ಸೈನಿಕ ಗೌರವಗಳೊಂದಿಗೆ ಇಂದು  ಬೆಳಗ್ಗೆ ನೆರವೇರಿತು.
ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರೊಂದಿಗೆ ಭಾರತೀಯ ಸೈನಿಕರು ನಡೆಸಿದ ಗುಂಡಿನ ಚಕಮಕಿಯ 17ನೆ ಸಿಖ್‌ ರೆಜಿಮೆಂಟ್‌ನ ಯೋಧ ಮನ್ ದೀಪ್‌ ಸಿಂಗ್‌ ಅವರು ವೇಳೆ ಹುತಾತ್ಮರಾಗಿದ್ದರು. ಅವರ ದೇಹವನ್ನು ಉಗ್ರರು ವಶಕ್ಕೆ ತೆಗೆದುಕೊಂಡು ಅಂಗಾಂಗಳನ್ನು ಕತ್ತರಿಸಿ ಹಾಕಿ ಪರಾರಿಯಾಗಿದ್ದರು. ಮನ್ ದೀಪ್ ಸಾವಿನ ಸುದ್ದಿ ಬರಸಿಡಿಲಿನಂತೆ ಕುರಕ್ಷೇತ್ರಕ್ಕೆ ಅಪ್ಪಳಿಸಿತ್ತು. ವೀರ ಯೋಧನನ್ನು ಕಳೆದುಕೊಂಡ ಊರರಲ್ಲಿ ಸ್ಮಶಾನ ಮೌನ ಆವರಿಸಿತ್ತು. ಯೋಧನಿಗೆ ಗೌರವ ಸೂಚಿಸಿ ದೀಪಾವಳಿ ಆಚರಿಸದಿರುವ ಬಗ್ಗೆ ಊರಿನ ಜನ ನಿರ್ಧಾರ ಕೈಗೊಂಡಿದ್ದರು.
ಮನ್ ದೀಪ್‌ ಸಿಂಗ್ ಅವರ ಪಾರ್ಥಿವ ಶರೀರ ಶನಿವಾರ ಅಂಬಾಲ ತಲುಪಿತ್ತು. ರವಿವಾರ ಕುಟುಂಬಕ್ಕೆ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಲಾಗಿತ್ತು.

ಮನ್ ದೀಪ್ ಸಿಂಗ್ ಅವರ  ಊರು  ಕುರುಕ್ಷೇತ್ರದ ಗ್ರಾಮ ಅಂಥೇರಿ ಆನೇಕ ಮಂದಿ ಯೋಧರನ್ನು ದೇಶ ಸೇವೆಗೆ ಅರ್ಪಿಸಿದ ಖ್ಯಾತಿಯನ್ನು ಹೊಂದಿದೆ. 
" ದೇಶಕ್ಕಾಗಿ ಬಲಿದಾನಗೈದ ಮಗನನ್ನು ಅಭಿನಂದಿಸುತ್ತೇನೆ. ಅಮಾನವೀಯವಾಗಿ ವರ್ತಿಸುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಮನ್‌ದೀಪ್‌ ತಂದ ಫೋಲ್‌ ಸಿಂಗ್ ಹೇಳಿದ್ದಾರೆ.
ಹುತಾತ್ಮ ಯೋಧ 27 ವರ್ಷದ ಮನ್ ದೀಪ್ ಸಿಂಗ್  2014ರಲ್ಲಿ ವಿವಾಹವಾಗಿದ್ದರು. ಪತ್ನಿ ಪ್ರೇರಣಾರನ್ನು ಅಗಲಿದ್ದಾರೆ. ಪ್ರೇರಣಾ  ಅವರು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಪೇದೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. "ದೇಶಕ್ಕಾಗಿ ಪ್ರಾಣ ನೀಡಿರುವ ಹುತಾತ್ಮ ಯೋಧರಿಗೆ ನನ್ನ ನಮನಗಳು. ನಾವು ಸೈನಿಕರನ್ನು ಈ ರೀತಿ ಸಾಯಲು ಬಿಡಬಾರದು.ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News