×
Ad

ಉ.ಪ್ರ.ಮುಖ್ಯಮಂತ್ರಿಯ ಜನತಾ ದರ್ಬಾರ್‌ನಲ್ಲಿ ನೂಕುನುಗ್ಗಲು,ಹಲವರಿಗೆ ಗಾಯ

Update: 2016-10-30 16:54 IST

ಇಟಾವಾ,ಅ.30: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಇಂದಿಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಬಾರ್ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ.

 ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿಗಳಿಗೆ ಅರ್ಜಿಗಳನು ಸಲ್ಲಿಸುವ ಧಾವಂತದಲ್ಲಿ ಕೆಲವರು ಕೆಳಕ್ಕೆ ಬಿದ್ದು ಇತರರ ಕಾಲ್ತುಳಿತಕ್ಕೆ ಸಿಲುಕಿದ್ದರು. ಈ ಗಲಾಟೆಯಲ್ಲಿ ಕಾರ್ಯಕ್ರಮವನ್ನು ವರದಿ ಮಾಡಲು ಬಂದಿದ್ದ ಕೆಲವು ಮಾಧ್ಯಮ ಪ್ರತಿನಿಧಿಗಳೂ ಗಾಯಗೊಂಡರು. ಎಲ್ಲ ಗಾಯಾಳುಗಳನ್ನು ಸೈಫಾಯಿ ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News