×
Ad

ಕೇರಳ:15,000 ಶಾಲೆಗಳನ್ನು ಬೆಸೆಯಲಿರುವ ‘ಸ್ಕೂಲ್ ವಿಕಿ’

Update: 2016-10-30 17:21 IST

ತಿರುವನಂತಪುರ,ಅ.30: ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನೊದಗಿಸುವ ಕೇರಳ ಸರಕಾರದ ಉಪಕ್ರಮ ‘ಐಟಿ ಅಟ್ ಸ್ಕೂಲ್’ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ವಿಕಿಪಿಡಿಯಾದ ಮಾದರಿಯಲ್ಲಿ ‘ಸ್ಕೂಲ್ ವಿಕಿ’ಯನ್ನು ಹೊರ ತರಲಿದೆ. ಇದು ರಾಜ್ಯದಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಐಟಿ ಜ್ಞಾನವನ್ನು ಮೂಡಿಸುವ ಜೊತೆಗೆ ಪರಸ್ಪರ ಜ್ಞಾನ ಹಂಚಿಕೆಯ ಉದ್ದೇಶವನ್ನು ಹೊಂದಿದೆ.

ಸಂಪೂರ್ಣವಾಗಿ ಮಲಯಾಳಂ ಭಾಷೆಯಲ್ಲಿ ಸಿದ್ಧಗೊಂಡಿರುವ ಸ್ಕೂಲ್ ವಿಕಿಯು ರಾಜ್ಯದಲ್ಲಿಯ 15,000 ಶಾಲೆಗಳಲ್ಲಿ 1ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ವಿಶಿಷ್ಟ ವಿಷಯ ಸಂಗ್ರಹವನ್ನು ಹೊಂದಿರಲಿದೆ.

ಸ್ಕೂಲ್ ವಿಕಿಗೆ ಲಾಗ್‌ಆನ್ ಆಗುವ ಮೂಲಕ ಎಲ್ಲ ಶಾಲೆಗಳು ಕೀ ಇನ್ ಜೊತೆಗೆ ಮೂಲ ಪ್ರಾಥಮಿಕ ವಿವರಗಳು ಮತ್ತು ಅವುಗಳ ಐತಿಹಾಸಿಕ ಉಲ್ಲೇಖಗಳನ್ನು ಅಪ್‌ಡೇಟ್ ಮಾಡಬಹುದಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News