ಫರಂಗಿಪೇಟೆ, ತುಂಬೆ ವಲಯ ಕಾಂಗ್ರೆಸ್‌ನಿಂದ ಸಿಎಂಗೆ ಸ್ವಾಗತ
ಬಂಟ್ವಾಳ, ಅ. 30: ಬಂಟ್ವಾಳ ಬಂಟರ ಭವನದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪುದು ವಲಯ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆಯಲ್ಲಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯ ಘೋಷ ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾಪಂ ಸದಸ್ಯೆ ಪದ್ಮಶ್ರೀ ದುರ್ಗೇಶ್ ಶೆಟ್ಟಿ, ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪಂಚಾಯತ್ ಸದಸ್ಯರಾದ ರಮ್ಲಾನ್, ದುರ್ಗೇಶ್ ಶೆಟ್ಟಿ, ಅಖ್ತರ್ ಹುಸೈನ್, ಝಾಹೀರ್, ಲತೀಫ್, ಖಾದರ್, ರಫೀಕ್ ಪೇರಿಮಾರ್, ಎಂ.ಕೆ.ಮುಹಮ್ಮದ್, ಇಕ್ಬಾಲ್ ಮಾರಿಪಳ್ಳ, ಸದಾಶಿವ ಕುಮ್ಡೇಲು, ಕಿಶೋರ್ ಪೂಜಾರಿ ಸುಜೀರ್, ಪ್ರವೀಣ್ ತುಂಬೆ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮಾರಿಪಳ್ಳದ ಸುಜೀರ್‌ನಲ್ಲಿ ಪಿ.ಯು. ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಪುದು ವಲಯ ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ತುಂಬೆಯಲ್ಲಿ ಸ್ವಾಗತ
ಬಂಟವಾಳ ಬಂಟರ ವನದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತುಂಬೆ ವಲಯ ಕಾಂಗ್ರೆಸ್ ವತಿಯಿಂದ ತುಂಬೆಯಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಅಮೀರ್ ಅಹ್ಮದ್ ತುಂಬೆ, ತುಂಬೆ ವಲಯಾಧ್ಯಕ್ಷ ಮೋನಪ್ಪ ಮಜಿ, ದೇವದಾಸ ಪೆರ್ಲಕ್ಕೆ, ಗೋಪಾಲ ಕೃಷ್ಣ ತುಂಬೆ, ಮುಹಮ್ಮದ್ ಖಮಲ್ ಮೊದಲಾದವರು ಉಪಸ್ಥಿತರಿದ್ದರು.