ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತೀರ್ಮಾನಕ್ಕೆ ಸಮಸ್ತ ಕರ್ನಾಟಕ ಬೆಂಬಲ
ಮಂಗಳೂರು, ಅ. 30: ಮುಸ್ಲಿಂ ಶರೀಅತ್‌ನ್ನು ತಿದ್ದುಪಡಿ ಮಾಡುವ ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಗೆ ಹೊರಟಿರುವ ಕೇಂದ್ರದ ನಿರ್ಧಾರವನ್ನು ಖಂಡಿಸಿರುವ ದ.ಕ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಈ ಬಗ್ಗೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ತೀರ್ಮಾನಕ್ಕೆ ‘ಸಮಸ್ತ ಕರ್ನಾಟಕ’ದ ಎಲ್ಲಾ ಅಧೀನ ಸಂಘಟನೆಗಳು ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.
ಖಾಝಿಯವರ ಅಧ್ಯಕ್ಷತೆಯಲ್ಲಿ ಮತ್ತು ಮಿತ್ತಬೈಲ್ ಉಸ್ತಾದ್‌ರ ಸಮ್ಮುಖದಲ್ಲಿ ಇಂದು ನಗರದ ಖಾಝಿ ಹೌಸ್‌ನಲ್ಲಿ ಸೇರಿದ ಕರ್ನಾಟಕ ಸಮಸ್ತದ ವಿವಿಧ ಸಂಘಟನೆಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇಸ್ಲಾಮಿನ ಶರೀಅತ್ ಪರಿಪೂರ್ಣವಾಗಿದೆ. ಅದರಲ್ಲಿ ತಿದ್ದುಪಡಿಗೆ ಅವಕಾಶವಿಲ್ಲ. ಇಂತಹ ಷಡ್ಯಂತ್ರವನ್ನು ಯಾವ ಬೆಲೆ ತೆತ್ತಾದರೂ ವಿರೋಧಿಸಲಾಗುವುದು. ಅಲ್ಲದೆ, ಶರೀಅತ್‌ನ್ನು ಸಂರಕ್ಷಿಸುವ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ಸಿದ್ಧವಿರುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಅಬ್ದುಲ್ ಅಜೀಝ್ ದಾರಿಮಿ, ಇಸ್ಹಾಕ್ ಫೈಝಿ, ಇಬ್ರಾಹೀಂ ಕೋಡಿಜಾಲ್, ಖಾಸಿಂ ದಾರಿಮಿ, ಹನೀಫ್ ಹಾಜಿ, ಕೆ.ಎಲ್.ಉಮರ್ ದಾರಿಮಿ, ಐ.ಮೊಯ್ದಿನಬ್ಬ ಹಾಜಿ, ಇಸ್ಮಾಯೀಲ್ ಯಮಾನಿ, ಲತೀಫ್ ದಾರಿಮಿ ರೆಂಜಾಡಿ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಸುಲೈಮಾನ್ ಹಾಜಿ ಕಲ್ಲಡ್ಕ, ಶರೀಫ್ ಮೂಸಾ ಕುದ್ದುಪದವು, ಹಕೀಂ ಪರ್ತಿಪಾಡಿ, ಇಬ್ರಾಹೀಂ ಕೊಣಾಜೆ, ಜಲೀಲ್ ಬದ್ರಿಯಾ, ರಿಯಾಝುದ್ದೀನ್ ಬಂದರ್, ಸಮದ್ ಹಾಜಿ, ಉಸ್ಮಾನ್ ಅಬ್ದುಲ್ಲಾ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು.