×
Ad

ವ್ಯಕ್ತಿಯ ದರೋಡೆಗೆ ಯತ್ನಿಸುತ್ತಿದ್ದವನ ಸೆರೆ: ಮಾರಕಾಸ್ತ್ರಗಳ ವಶ

Update: 2016-10-30 21:47 IST

ಮಂಗಳೂರು, ಅ.30:ವ್ಯಕ್ತಿಯೋರ್ವನನ್ನು ಬೆದರಿಸಿ ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.

ಅಬ್ದುರ್ರಹೀಂ ಬಂಧಿತನಾಗಿದ್ದು, ಈತನಿಂದ ತಲವಾರು, ಮೆಣಸಿನ ಪುಡಿ ಸಹಿತ ಕೆಲ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ಮುಹಮ್ಮದ್ ಅವೀಝ್ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಗರದ ಹಳೆ ಬಂದರ್‌ನ ನೀರೇಶ್ವಾಲ್ಯ ಜಂಕ್ಷನ್ ಬಳಿ ಅಬ್ದುರ್ರಹೀಂ ಮತ್ತು ಮುಹಮ್ಮದ್ ಅವೀಝ್ ಎಂಬವರು ಸುಲಿಗೆ ಮಾಡಲು ಸಂಚು ರೂಪಿಸಿಕೊಂಡು ಅದಕ್ಕೆ ಬೇಕಾದ ತಲವಾರು ಹಾಗೂ ಮೆಣಸಿನ ಹುಡಿಯ ಪ್ಯಾಕೇಟನ್ನು ಇಟ್ಟುಕೊಂಡು ಹೊಂಚು ಹಾಕುತ್ತಿದ್ದರು. ಈ ವೇಳೆ ಆಟೊರಿಕ್ಷಾದಲ್ಲಿ ಬಂದ ಅಪರಿಚಿತ ವ್ಯಕ್ತಿಯ ಬಳಿಯಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ತಲವಾರು ಹಿಡಿದುಕೊಂಡು ಹೋಗಿ ಆತನನ್ನು ಹಿಡಿದು ಬೆದರಿಸಿ ಚೈನನ್ನು ಎಳೆಯಲು ಪ್ರಯತ್ನಿಸಿದಾಗ ಆತನು ಬೊಬ್ಬೆ ಹೊಡೆದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಮಂಗಳೂರು ದಕ್ಷಿಣ ಠಾಣೆಯ ಎಸ್ಸೈ ಅನಂತ ಮುರ್ಡೇಶ್ವರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News