ಶರೀಅತ್ ಕಾನೂನು ಜನ ಹಿತಕ್ಕೆ ಅಡ್ಡಿಯಾಗದು: ಡಾ. ಫಾರೂಕ್ ನಈಮಿ.

Update: 2016-10-30 17:45 GMT

ಮಂಗಳೂರು, ಅ.30: ಇಸ್ಲಾಂ ಜನಹಿತವನ್ನು ಬೋಧಿಸುವ ಧರ್ಮವಾಗಿದ್ದು, ಅದು ಪ್ರತಿಪಾದಿಸುವ ಶರೀಅತ್ ಕಾನೂನುಗಳು ಜನರ ಹಿತಕ್ಕೆ ಅಡ್ಡಿಯಾಗದು. ಅಲ್ಪಜ್ಞಾನಿಗಳ ಮಾತು ಕೇಳಿ ಸರಕಾರ ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಫಾರೂಕ್ ನಈಮಿ ಕೊಲ್ಲಂ ಹೇಳಿದರು.

ಅವರು ಕಾಸರಗೋಡು ಕುಂಬಳೆ ಸಮೀಪದ ಮುಹಿಮ್ಮಾತ್ ವಿದ್ಯಾಸಂಸ್ಥೆಯು ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಿಲ್ವರ್ ಜುಬಿಲಿ ಪ್ರಚಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು.

ಸಚಿವ ಯು.ಟಿ.ಖಾದರ್,ಅಲ್ ಮದೀನ ಸಾರಥಿ ಅಬ್ಬಾಸ್ ಮುಸ್ಲಿಯಾರ್ , ದಾರುಲ್ ಇರ್ಶಾದ್ ಮಾಣಿ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, ಇಸ್ಮಾಯೀಲ್ ತಂಙಳ್ ಉಜಿರೆ, ಉ.ಪಿ.ಎಸ್ ತಂಙಳ್, ಕೆಸಿರೋಡ್ ಹುಸೈನ್ ಸಅದಿ, ಎಂ.ಎಸ್.ಎಂ ಝೈನಿ ಕಾಮಿಲ್, ಕೆ.ಕೆ.ಎಂ.ಕಾಮಿಲ್ ಸಖಾಫಿ ಸುರಿಬೈಲ್, ಕೆ.ಎಂ. ಅಬೂಬಕರ್ ಸಿದ್ದೀಕ್, ಎಂ.ಎ. ಸಿದ್ದೀಕ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ ಮುಂತಾದ ಉಲಮಾ- ಉಮರಾ ನಾಯಕರು ಉಪಸ್ಥಿತರಿದ್ದರು.

ಮುಹಿಮ್ಮಾತ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿ, ಮೂಸ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News