ನಾಳೆ ಕ್ಯಾಂಪ್ಕೊ ಚಾಕಲೆಟ್ ವಿತರಣಾ ಮಳಿಗೆ ಆರಂಭ
Update: 2016-10-30 23:43 IST
ಪುತ್ತೂರು, ಅ.30: ಪುತ್ತೂರು ಹಾಗೂ ಆಸುಪಾಸಿನ ಗ್ರಾಹಕರಿಗೆ ಕ್ಯಾಂಪ್ಕೊ ಚಾಕಲೆಟು ಉತ್ಪನ್ನಗಳು ಸುಲಭವಾಗಿ ದೊರಕುವಂತಾಗಲು ಇಲ್ಲಿನ ಮಹಾಮಾಯ ದೇವಸ್ಥಾನದ ಬಳಿಯಲ್ಲಿರುವ ಕ್ಯಾಂಪ್ಕೊದ ಸ್ವಂತ ಕಟ್ಟಡದಲ್ಲಿ ಚಾಕಲೆಟು ವಿತರಣೆ ಹೊಸ ಮಳಿಗೆಯನ್ನು ನ.1ರಿಂದ ಆರಂಭಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ನ.1ರಂದು ಮಧ್ಯಾಹ್ನ 3ಕ್ಕೆ ನೂತನ ಮಳಿಗೆ ಉದ್ಘಾಟನೆಗೊಳ್ಳಲಿದ್ದು, ಚಿತ್ರನಟಿ ನೇಹಾ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.