×
Ad

ಮೊಸುಲ್ ನಗರಕ್ಕೆ ಇರಾಕಿ ಪಡೆಗಳ ಮುತ್ತಿಗೆ

Update: 2016-10-30 23:58 IST

 ಅಲ್ ಖಯ್ಯರಹ್(ಇರಾಕ್),ಅ. 30: ಐಸಿಸ್ ಉಗ್ರರ ಭದ್ರಕೋಟೆಯಾಗಿರುವ ಮೊಸುಲ್ ನಗರ ಹಾಗೂ ನೆರೆಯ ಸಿರಿಯ ನಡುವಿನ ಪೂರೈಕೆ ಮಾರ್ಗಗಳನ್ನು ಕಡಿದುಹಾಕಲು ಇರಾಕ್‌ನ ಅರೆಸೈನಿಕ ಪಡೆಗಳು ರವಿವಾರ ಕಾರ್ಯಾಚರಣೆಯನ್ನು ಆರಂಭಿಸಿವೆ. ಇದರೊಂದಿಗೆ ಐಸಿಸ್ ವಿರುದ್ಧ ಇರಾಕ್ ಪಡೆಗಳು ಎರಡು ವಾರಗಳಿಂದ ನಡೆಸುತ್ತಿರುವ ಸಮರವು ನಿರ್ಣಾಯಕ ಹಂತವನ್ನು ತಲುಪಿದೆ.
 ಇರಾನ್ ಬೆಂಬಲಿತ ಶಿಯಾ ಬಂಡುಕೋರರ ಪಡೆ ಹಶೀದ್ ಅಲ್ ಶಾಬಿ ಕೂಡಾ ಇರಾಕಿ ಭೂಸೇನೆಯ ಜೊತೆ ಕೈಜೋಡಿಸಿದ್ದು, ಮೊಸುಲ್‌ನಗರವನ್ನು ಮರುವಶಪಡಿಸಿ ಕೊಳ್ಳುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
 ‘‘ಮೊಸುಲ್ ಹಾಗೂ ಸಿರಿಯದ ರಖ್ಖಾ ನಗರಗಳ ನಡುವಿನ ಪೂರೈಕೆ ಮಾರ್ಗವನ್ನು ಕಡಿದುಹಾಕುವುದು ಹಾಗೂ ಮೊಸುಲ್‌ನಲ್ಲಿ ಐಸಿಸ್ ಮೇಲಿನ ದಿಗ್ಬಂಧನವನ್ನು ಇನ್ನಷ್ಟು ಬಿಗಿಗೊಳಿಸುವುದು ಮತ್ತು ತಾಲ್ ಅಫರ್ ನಗರವನ್ನು ವಿಮೋಚನೆಗೊಳಿಸುವುದೇ ಈ ಕಾರ್ಯಾಚರಣೆಯ ಗುರಿಯಾಗಿದೆ’’ ಎಂದು ಇರಾಕಿ ಅರೆಸೈನಿಕ ಪಡೆ ಹಾಶದ್ ಅಲ್-ಶಾಬಿಯ ವಕ್ತಾರ ಅಹ್ಮದ್ ಅಲ್ ಅಸ್ಸಾದಿ ತಿಳಿಸಿದ್ದಾರೆ.
ಈ ಮಧ್ಯೆ ಐಸಿಸ್ ವಿರುದ್ಧ ಕಾಳಗದಲ್ಲಿ ಶಿಯಾ ಬಂಡುಕೋರರ ಪಾಲ್ಗೊಳ್ಳುವಿಕೆಯನ್ನು ಸುನ್ನಿ ಅರಬ್‌ರಾಜಕಾರಣಿಳು ಹಾಗೂ ಇರಾಕಿ ಕುರ್ದ್‌ಗಳು ತೀವ್ರವಾಗಿ ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News