×
Ad

ಮೂಡುಬಿದಿರೆ : ಆಟೋ ಚಾಲಕರ ಸಂಘದಿಂದ ಧನಲಕ್ಷ್ಮೀ ಪೂಜೆ

Update: 2016-10-31 17:14 IST

ಮೂಡುಬಿದಿರೆ,ಅ.31: ಆಟೋ ರಿಕ್ಷಾ ಮಾಲಕ -ಚಾಲಕರ ಸಂಘದ ಆಶ್ರಯದಲ್ಲಿ ಶ್ರೀಧನಲಕ್ಷ್ಮೀ ಹಾಗೂ ವಾಹನ ಪೂಜೆ ಭಾನುವಾರ ರಾತ್ರಿ ಮೂಡುಬಿದಿರೆ ಸಮಾಜಮಂದಿರ ಕಾಂಪ್ಲೆಕ್ಸ್ ಮುಂಭಾಗದ ಆಟೋ ಪಾರ್ಕ್‌ನಲ್ಲಿ ನಡೆಯಿತು.

ಹಲವು ವರ್ಷದಿಂದ ಪೂಜೆಯ ಪೌರೋಹಿತ್ಯ ಮಾಡುತ್ತಿರುವ ಅಲಂಗಾರು ಬಡಗ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ಈಶ್ವರ ಭಟ್ ಅವರನ್ನು ಗೌರವಿಸಲಾಯಿತು. ಉತ್ತಮ ಅಲಂಕೃತಗೊಂಡ ಆಟೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭುವನೇಶ್ ವಿದ್ಯಾಗಿರಿ, ದ್ವಿತೀಯ ಸ್ಥಾನ ಪಡೆದ ಲತೇಶ್ ವಿದ್ಯಾಗಿರಿ ಹಾಗೂ ತೃತೀಯ ಸ್ಥಾನ ಪಡೆದ ಗಣೇಶ್ ಗಂಟಾಲ್ಕಟ್ಟೆ ಅವರಿಗೆ ಬಹುಮಾನ ವಿತರಿಸಲಾಯಿತು.

 ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಸಂಘದ ಗೌರವಾಧ್ಯಕ್ಷ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ರತ್ನಾಕರ ದೇವಾಡಿಗ, ಬಾಹುಬಲಿ ಪ್ರಸಾದ್, ಸುರೇಶ್ ಕೋಟ್ಯಾನ್, ಮೂಡಾ ಸದಸ್ಯ ಸುರೇಶ್ ಪ್ರಭು, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಿಥುನ್ ರೈ, ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಉದ್ಯಮಿ ದಿವಾಕರ ಶೆಟ್ಟಿ, ವಕೀಲ ಎಂ.ಎಸ್ ಕೋಟ್ಯಾನ್, ಸಂಘದ ಅಧ್ಯಕ ಭಾಸ್ಕರ ಆಚಾರ್ಯ, ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್, ಸಂತೋಷ್ ಶೆಟ್ಟಿ, ಅಜಯ್ ವಿದ್ಯಾಗಿರಿ, ಕಾರ್ಯದರ್ಶಿ ರಾಕೇಶ್ ಕೋಟ್ಯಾನ್,ಜತೆ ಕಾರ್ಯದರ್ಶಿಗಳಾದ ಸಂತೋಷ್ ಬಾಕ್ಯರ್, ಮಜೀದ್ ಕೊಡಂಗಲ್ಲು ಕೋಶಾಧಿಕಾರಿ ಪ್ರಶಾಂತ್ ಅಂಚನ್, ಸಂಚಾಲಕ ಪ್ರದೀಪ್ ರೈ, ಸಲಹೆಗಾರ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News