×
Ad

ಭೋಪಾಲ್ ಎನ್‌ಕೌಂಟರ್: ನಿಗೂಢ ಎಂದ ದಿಗ್ವಿಜಯ್ ಸಿಂಗ್, ಅಲ್ಕಾಲಾಂಬಾ

Update: 2016-10-31 17:39 IST

ಭೋಪಾಲ್,ಅಕ್ಟೋಬರ್ 31: ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡು ಹೋದ ಸಿಮಿಕಾರ್ಯಕರ್ತರನ್ನು ಕೊಂದು ಹಾಕಿದ ಘಟನೆಯ ಬಗ್ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿಪಾರ್ಟಿ ಶಂಕೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಭೋಪಾಲ್ ಸೆಂಟ್ರಲ್ ಜೈಲಿನಿಂದಪಾರಾದ ಎಂಟು ಆರೋಪಿಗಳನ್ನು ಗಂಟೆಗಳೊಳಗೆ ಎನ್ ಕೌಂಟರ್ ಮಾಡಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿಪಾರ್ಟಿ ಶಂಕೆ ವ್ಯಕ್ತಪಡಿಸಿ ರಂಗಪ್ರವೇಶಿಸಿದೆ.

"ಅವರು ಜೈಲಿನಿಂದ ಓಡಿಹೋಗಿದ್ದಾರೆಯೇ? ಅಥವಾ ಪೂರ್ವಭಾವಿಯಾಗಿ ತಯಾರಿಸಿದ ಯೋಜನೆ ಹೋಗಗೊಡಲಾಯಿತೆ ಎಂದು ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಸಿಂಗ್ ಆಗ್ರಹಿಸಿದ್ದಾರೆ.

ಜೈಲಿಂದ ತಪ್ಪಿಸಿಕೊಂಡ ಎಲ್ಲರೂ ಒಂದೇ ಸ್ಥಳದಲ್ಲಿ ಕೊಲ್ಲಲ್ಪಟ್ಟಿದ್ದು ಹೇಗೆ ಎಂದು ಆಮ್ ಅದ್ಮಿಪಾರ್ಟಿ ಶಾಸಕಿ ಅಲಕಾ ಲಾಂಬ ಪ್ರಶ್ನಿಸಿದ್ದಾರೆ.ಕೈದಿಗಳು ಜೈಲಿಂದ ಪರಾರಿಯಾಗಿದ್ದು ಹೇಗೆ ಎಂದು ತನಿಖೆ ನಡೆಯ ಬೇಕೆಂದು ಕಾಂಗ್ರೆಸ್ ನಾಯಕ ಕಮಲನಾಥ್ ಆಗ್ರಹಿಸಿದ್ದಾರೆ.

ಸೋಮವಾರ ಬೆಳಗ್ಗೆ ಮೂರು ಗಂಟೆಯ ವೇಳೆ ವಿಚಾರಣಾ ಕೈದಿಗಳಾದ ಎಂಟು ಮಂದಿ ಆರೋಪಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಡ್ಯೂಟಿಯಲ್ಲಿದ್ದ ಕಾನ್ ಸ್ಟೇಬಲ್‌ನನ್ನು ಕೊಂದು ಆರೋಪಿಗಳು ತಪ್ಪಿಸಿಕೊಂಡರು ಎಂದು ಹೇಳಲಾಗಿತ್ತು. ಜೈಲಿನಿಂದ ತಪ್ಪಿಸಿಕೊಂಡ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಭೋಪಾಲದ ಗಡಿಗ್ರಾಮವೊಂದರಲ್ಲಿ ಪೊಲೀಸರು ಮತ್ತು ಭಯೋತ್ಪಾದನಾ ವಿರೋಧಿ ದಳ ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದೆ ಎಂದು ಪೊಲೀಸರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News