×
Ad

ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕ ವತಿಯಿಂದ ಮೋಂಟುಗೋಳಿಯಲ್ಲಿ ಕನ್ನಡ ರಾಜೋತ್ಸವ

Update: 2016-10-31 19:39 IST

ಕೊಣಾಜೆ,ಅ.31: ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕ ವತಿಯಿಂದ ಕನ್ನಡ ರಾಜೋತ್ಸವ ಕಾರ್ಯಕ್ರಮ ನ, 1ರಂದು ಮಂಗಳವಾರ ಮೋಂಟುಗೋಳಿ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ 9ಗಂಟೆಗೆ ಧ್ವಜಾರೋಹಣ ಮಧ್ಯಾಹ್ನ 3ಗಂಟೆಗೆ ಕಬಡ್ಡಿ ಪಂದ್ಯಾಟ ಸಂಜೆ 7ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ರಾಜ್ಯ ಆಹಾರ ಸಚಿವ ಯು.ಟಿ ಖಾದರ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಇಬ್ರಾಹೀಂ ಕೋಡಿಜಾಲ್ ಮುಂತಾದ ಗಣ್ಯರು ಭಾಗವಹಿಸಲ್ಲಿದ್ದಾರೆ. ಈ ಸಂದರ್ಭ ದಂತ ವೈದ್ಯ ಡಾ.ಜಿ ಕೃಷ್ಣಭಟ್ ಗಂಗರಮಜಲುರವರನ್ನು ಸನ್ಮಾನಿಸಲಾವುಗುಹು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕಾಧ್ಯಕ್ಷ ಟಿ.ಎಂ ಅಬೂಸಾಲಿ ಮೋಂಟುಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News