ವಿಷಜಂತು ಕಡಿತ: ಯುವಕ ಸಾವು
ಪಡುಬಿದ್ರಿ,ಅ.31: ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಯುವಕನೋರ್ವನಿಗೆ ವಿಷಜಂತು ಕಡಿದು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಎರ್ಮಾಳಿನಲ್ಲಿ ನಡೆದಿದೆ.
ಮೃತನನ್ನು ಜಗನ್ನಾಥ್ ಶೆಟ್ಟಿಗಾರ್ ಎಂಬವರ ಪುತ್ರ ರತನ್ ಶೆಟ್ಟಿಗಾರ್ (24) ಎಂದು ಗುರುತಿಸಲಾಗಿದೆ. ಯುಪಇಸಿಎಲ್ ಕಂಪೆನಿಯ ಉದ್ಯೋಗಿಯಾಗಿರುವ ಈತ ಭಾನುವಾರ ರಜಾ ದಿನವಾಗಿದ್ದು, ಶಾಲಾ ಮೈದಾನದಲ್ಲಿ ವಾಲಿಬಾಲ್ ಆಟವಾಡಿ ಮನೆಗೆ ತೆರಳಿದ್ದ. ಈ ವೇಳೆ ಕಾಲಿಗೆ ಚುಚ್ಚಿದಂತಾಗಿತ್ತು. ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ. ಈತನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರು. ಆದರೆ ಚಿಕಿತ್‌ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಎಲ್ಲರಲ್ಲೂ ಬೆರೆಯುವ ಈತ ಉತ್ತಮ ಸ್ವಭಾವವನ್ನು ಬೆಳೆಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತನ್ನ ವೃತ್ತಿಯ ಮಧ್ಯೆಯೂ ಕೋಚಿಂಗ್ ನೀಡುತಿದ್ದ. ಆರು ತಿಂಗಳ ಹಿಂದೆಯಷ್ಟೆ ಯುಪಿಸಿಎಲ್‌ನಲ್ಲಇ ಉದ್ಯೋಗಿಯಾಗಿ ಸೇರಿಕೊಂಡಿದ್ದ. ಕುಟುಂಬದ ಆಧಾರ ಸ್ಥಂಭವಾಗಿದ್ದ. ಈತನ ಸಾವಿನಿಂದ ಕುಟುಂಬ ಕಂಗಾಲಾಗಿದೆ.