ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಮಂಗಳೂರು, ಅ.31: ರಾಜ್ಯೋತ್ಸವ ಆಚರಣೆ ಸಂದರ್ಭ ನೀಡಲಾಗುವ ಜಿಲ್ಲಾ ಪ್ರಶಸ್ತಿಯನ್ನು ದ.ಕ. ಜಿಲ್ಲಾಡಳಿತ ಪ್ರಕಟಿಸಿದ್ದು, ಆಯ್ಕೆಯಾದವರ ವಿವರ ಹೀಗಿವೆ.
1. ಪ್ರಭಾಕರ ಮಯ್ಯ, ನಡ ಗ್ರಾಮ, ಬೆಳ್ತಂಗಡಿ (ಕೃಷಿ), 2. ಎಸ್.ಎಂ. ಅಬೂಬಕರ್ ಸುರಿಬೈಲು ಬಂಟ್ವಾಳ (ಶಿಕ್ಷಣ), 3. ಬಿ.ಸೀತಾರಾಮ ತೋಳ್ಪಡಿತ್ತಾಯ, ಶ್ರೀ ಕ್ಷೇತ್ರ ಧರ್ಮಸ್ಥಳ (ಯಕ್ಷಗಾನ), 4. ಎಂ.ಸುಮಿತ್ರ ಕುಮಾರ್, ಪಾಂಡೇಶ್ವರ ನ್ಯೂರೋಡ್ (ಕ್ರೀಡೆ), 5. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು (ಸಮಾಜಸೇವೆ-ಸಂಸ್ಥೆ), 6. ಭಾಸ್ಕರ್ ಕುಲಾಲ್ ಬರ್ಕೆ, ಕಂಬ್ಳಬೆಟ್ಟು ಹಳೆಯಂಗಡಿ (ಸಾಹಿತ್ಯ), 7. ಸತ್ಯಾ ಪಿ, ಮಾಂಟ್ಯಾಯಿ ಮನೆ, ನಾರಾವಿ (ಜಾನಪದ), 8. ರಾಮಕೃಷ್ಣ ಆರ್. ತಿಲಕನಗರ, ಬೋಳೂರು (ಪತ್ರಿಕೋದ್ಯಮ), 9. ಡಾ.ಅಲೋನಾನ್ಸ್ ಸುರೇಶ್ ಜೋಸೆಫ್ ಅರಾಹ್ನ- ಕಾರ್ನಾಡು, ಮುಲ್ಕಿ (ವೈದ್ಯಕೀಯ), 10. ಗೋಪಾಲಕೃಷ್ಣ ಬಂಗೇರ ಮಧ್ವ, ಕಾವಳಪಡೂರು (ಲಲಿತಕಲೆ), 11. ಖಾಲಿದ್ ತಣ್ಣೀರುಬಾವಿ, ಎನ್.ಎಂ.ಪಿ.ಟಿ. ಮಂಗಳೂರು (ಸಂಗೀತ), 12. ಜಯಂತಿ ಎಸ್.ಬಂಗೇರ, ಕೋಡಂಗಲ್ಲು, ಮೂಡುಬಿದಿರೆ (ರಂಗಭೂಮಿ ಹಾಗೂ ತುಳುಸಾಹಿತ್ಯ), 13. ನಾರಾಯಣ ಕೋಟ್ಯಾನ್ ಬೋಳಾರ್, (ಕ್ರೀಡೆ/ಕುಸ್ತಿ), 14.ಪಿ.ಸಾದು ಪೂಜಾರಿ, ಕಾಟಿಪಳ್ಳ, ಮಂಗಳೂರು (ಶಿಕ್ಷಣ), 15. ಮೊಡಂಬೈಲ್ ರವಿ ಶೆಟ್ಟಿ ಮುಂಡೂರು ಗ್ರಾಮ, ಪುತ್ತೂರು (ಸಮಾಜಸೇವೆ), 16. ಎಸ್.ಜಗದೀಶ್ಚಂದ್ರ ಅಂಚನ್, ಸೂಟರ್‌ಪೇಟೆ, (ಕ್ರೀಡಾಲೇಖಕ ಮತ್ತು ಬರವಣಿಗೆ), 17. ಯೋಗೀಶ್ ಕುಮಾರ್. ಕೆ.ಎಸ್. ನಡಕ್ಕರ, ಪಡಂಗಡಿ ಗ್ರಾಮ, ಬೆಳ್ತಂಗಡಿ (ಸಮಾಜಸೇವೆ), 18. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಸಸಿಹಿತ್ಲು, (ಸಮಾಜಸೇವೆ-ಸಂಸ್ಥೆ), 19. ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ, ಮಂಗಳೂರು (ಸಮಾಜಸೇವೆ-ಸಂಸ್ಥೆ), 20.ಶ್ರೀಶಾರದಾಂಬಾ ಭಜನಾ ಮಂಡಳಿ, ಪಂಜ,ಐವತೊಕ್ಲು ಗ್ರಾಮ (ಸಮಾಜಸೇವೆ-ಸಂಸ್ಥೆ), 21. ಜಗದೀಶ್ ಶೆಟ್ಟಿ, ಬಿಜೈ ಚರ್ಚ್ ರಸ್ತೆ, ಮಂಗಳೂರು (ಯೋಗ), 22. ಹಮೀದ್ ಕೂರ್ನಡ್ಕ, ಪುತ್ತೂರು (ದೃಶ್ಯ ಮಾಧ್ಯಮ).
ನ.1ರಂದು ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 7:45ಕ್ಕೆ ಜ್ಯೋತಿ ವೃತ್ತದಿಂದ ಮೆರವಣಿಗೆ ನಡೆಯಲಿದೆ. 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಧ್ವಜಾರೋಹಣ ನೆರವೇರಿಸುವರು. ಅಪರಾಹ್ನ 3:15ಕ್ಕೆ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಪ್ರಕಟನೆ ತಿಳಿಸಿದೆ.
ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಗೆ
ಕ್ರೀಡಾ ಬರವಣಿಗೆಯ ಮೂಲಕ ಜಿಲ್ಲೆ, ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಗುರುತಿಸಿಕೊಂಡಿರುವ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ 26 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಸುಮಾರು 2,600ಕ್ಕೂ ಹೆಚ್ಚು ಕ್ರೀಡಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಾಜ ರತ್ನ ರಾಜ್ಯ ಪ್ರಶಸ್ತಿ’, 2013ರಲ್ಲಿ ಸೌಹಾರ್ದ ಸಂಗಮದಲ್ಲಿ ‘ಮೀಡಿಯಾ ಅವಾರ್ಡ್’, 2010ರಲ್ಲಿ ದ.ಕ.ಮುಂಡಾಲ ಮಹಾಸಭಾದಿಂದ ‘ಸಾಧಕ ಪ್ರಶಸ್ತಿ’, ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯಿಂದ ಪ್ರಶಸ್ತಿಗಳು ದೊರೆತಿವೆ.