×
Ad

‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನರ ಪಾತ್ರ ಹಿರಿದು’ : ಸಚಿವ ಪ್ರಮೋದ್ ಮಧ್ವರಾಜ್

Update: 2016-10-31 21:41 IST

ಉಡುಪಿ, ಅ.31: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದು.ಪ್ರತಿಭಾ ಸಂಪನ್ನ ಯುವಜನತೆ ಸಮುದಾಯದ ಬಹುದೊಡ್ಡ ಆಸ್ತಿ. ಇಂತಹ ಯುವಕರಲ್ಲಿ ಅಂತರ್ಗತವಾಗಿರುವ ಸಂಗೀತ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಾಗ ಸ್ವತಃ ಯುವಕರ ವ್ಯಕ್ತಿತ್ವ ಬೆಳೆಯುವುದು ಮಾತ್ರವಲ್ಲ ಅವರಿಂದ ಹೊರಹೊಮ್ಮುವ ಸಂಗೀತಾಭಿವ್ಯಕ್ತಿ ಜನತೆಗೆ ಮುದ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಇಂದ್ರಾಳಿ ಪತ್ರಕರ್ತರ ಕಾಲೋನಿಯ ಶ್ರೀಸವಾಸ್ಯಂನಲ್ಲಿ ರೋಟರಿ ಜಿಲ್ಲೆ 3182, ವಲಯ 4ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಅವರ ಆತಿಥ್ಯದಲ್ಲಿ ನಡೆದ ಯುವ ಧ್ವನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.

ಇಂದ್ರಾಳಿ ಪತ್ರಕರ್ತರ ಕಾಲೋನಿಯ ಶ್ರೀಸವಾಸ್ಯಂನಲ್ಲಿ ರೋಟರಿ ಜಿಲ್ಲೆ 3182, ವಲಯ 4ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಅವರ ಆತಿಥ್ಯದಲ್ಲಿ ನಡೆದ ಯುವ ್ವನಿಕಾರ್ಯಕ್ರಮದಲ್ಲಿಮುಖ್ಯಅತಿಥಿಯಾಗಿಾಗವಹಿಸಿ ಅವರು ಮಾತನಾಡುತಿದ್ದರು. ಸಂಗೀತದ ಮೂಲಕ ಅನೇಕ ವಿಚಾರಧಾರೆಗಳನ್ನು ಜನತೆಗೆ ತಲುಪಿಸುವುದು ಸುಲಭ ಸಾಧ್ಯವಾಗುತ್ತದೆ. ಅದು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ದಾರಿ ಯಾಗುತ್ತದೆ ಎಂದು ಪ್ರವೆದ್ ಮಧ್ವರಾಜ್ ಅಭಿಪ್ರಾಯಪಟ್ಟರು.

ಸಂಗೀತದ ಮೂಲಕ ಅನೇಕ ವಿಚಾರಾರೆಗಳನ್ನುಜನತೆಗೆತಲುಪಿಸುವುದುಸುಲ ಸ್ಯಾವಾಗುತ್ತದೆ.ಅದು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆದಾರಿಯಾಗುತ್ತದೆಎಂದುಪ್ರಮೋದ್‌ ಮಧ್ವರಾಜ್ ಅಭಿಪ್ರಾಯಪಟ್ಟರು. ಖ್ಯಾತ ಖಗೋಳ ತಜ್ಞರಾದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಪಿ.ಭಟ್ ದೀಪ ಪ್ರಜ್ವಲದೊಂದಿಗೆ ಯುವಧ್ವನಿಯನ್ನು ಉದ್ಘಾಟಿಸಿದರು. ಭೌತಶಾಸ್ತ್ರದ ಅನೇಕ ತತ್ವಗಳನ್ನು ಸಂಗೀತ ಕಲೆಯೊಂದಿಗೆ ಸಮೀಕರಿಸಿ ಅಧ್ಯಯನಗಳನ್ನು ಮಾಡಿದಾಗ ಅನೇಕ ಹೊಸ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು ಸಾಧ್ಯ ಎಂದವರು ಹೇಳಿದರು.

ಖ್ಯಾತ ಖಗೋಳ ತಜ್ಞರಾದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಪಿ.ಟ್‌ದೀಪಪ್ರಜ್ವಲದೊಂದಿಗೆಯುವ್ವನಿಯನ್ನು ಉದ್ಘಾಟಿಸಿದರು. ಬೌತಶಾಸ್ತ್ರದ ಅನೇಕ ತತ್ವಗಳನ್ನು ಸಂಗೀತಕಲೆಯೊಂದಿಗೆ ಸಮೀಕರಿಸಿ ಅ್ಯಧ್ಯಯನಗಳನ್ನು ಮಾಡಿದಾಗ ಅನೇಕ ಹೊಸ ವೈಜ್ಞಾನಿಕ ಸಂಶೋನೆಗಳನ್ನು ನಡೆಸಲು ಸ್ಯಾಧ್ಯ ಎಂದವರು ಹೇಳಿದರು. ಯುವಧ್ವನಿಯಲ್ಲಿ ಉಡುಪಿಯ ಖ್ಯಾತ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಗುರುಸಂದೇಶ ನೀಡಿ ಯುವ ಕಲಾವಿದರನ್ನು ಪ್ರೋತ್ಸಾಹಿಸಿದರು. ರೋಟರಿ ಉಡುಪಿ ಅಧ್ಯಕ್ಷ ಡಾ. ಸುರೇಶ ಶೆಣೈ ಆಶಯ ನುಡಿಗಳನ್ನಾಡಿದರು.

 ಜಿಲ್ಲೆಯ ಉದಯೋನ್ಮುಖ ಯುವ ಸಂಗೀತ ಪ್ರತಿಭೆಗಳಾದ ಸೂರಜ್ ಶೆಣೈ ಉಡುಪಿ, ಶ್ರವಣ್ ಎಸ್. ಬಾಸ್ರಿ ಉಡುಪಿ, ವಿನಯ ಭಟ್ ಮಂಗಳೂರು, ಚೇತನ್ ನಾಯಕ್ ಉಡುಪಿ, ಸಂಪ್ರೀತ್ ಉಡುಪಿ, ಪ್ರಸಾದ್ ಶೆಣೈ ಉಡುಪಿ, ರಜತ್ ಮಯ್ಯ ಉಜಿರೆ, ಡಾ. ಅಭಿಷೇಕ್ ರಾವ್ ಕೊರಡ್ಕಲ್, ಸುಪ್ರಭಾ ಕಲ್ಕೂರ್ ಕುಂಜಿಬೆಟ್ಟು ಸಂಗಿತ ವಾದ್ಯಗೋಷ್ಠಿ ಮತ್ತು ಸುಗಮ ಸಂಗೀತ ನಡೆಸಿಕೊಟ್ಟರು.

ಕೊನೆಯಲ್ಲಿ ಉಡುಪಿಯ ಶ್ರಾವ್ಯಾ ಎಸ್. ಬಾಸ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪ್ರಸಿದ್ಧ ಹಿರಿಯ ಸಂಗೀತ ಕಲಾವಿದರುಗಳಾದ ವಿದ್ವಾನ್ ಬಾಲಚಂದ್ರ ಭಾಗವತ (ಮೃದಂಗ) ವಿದ್ವಾನ್ ಶ್ರೀಧರ ಆಚಾರ್ಯ ಪಾಡಿಗಾರು (ವಯಲಿನ್) ಮತ್ತು ವಿದ್ವಾನ್ ದಿನೇಶ ಶೆಣೈ ಪಾಂಗಾಳ (ತಬಲಾ) ಸಹಕಾರ ನೀಡಿದರು.

ಕೊನೆಯಲ್ಲಿ ಉಡುಪಿಯ ಶ್ರಾವ್ಯಾ ಎಸ್. ಬಾಸ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪ್ರಸಿದ್ಧ ಹಿರಿಯ ಸಂಗೀತ ಕಲಾವಿದರುಗಳಾದ ವಿದ್ವಾನ್ ಬಾಲಚಂದ್ರ ಾಗವತ(ಮೃದಂಗ)ವಿದ್ವಾನ್‌ಶ್ರೀರ ಆಚಾರ್ಯ ಪಾಡಿಗಾರು (ವಯಲಿನ್) ಮತ್ತು ವಿದ್ವಾನ್ ದಿನೇಶ ಶೆಣೈ ಪಾಂಗಾಳ (ತಬಲಾ) ಸಹಕಾರ ನೀಡಿದರು. ರೋಟರಿ ಜಿಲ್ಲೆ 3182ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಣೇಶ ರಾವ್ ಎಲ್ಲೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News