ಬಾವಿಗೆ ಬಿದ್ದು ವೃದ್ಧೆ ಮೃತ್ಯು
Update: 2016-10-31 22:09 IST
ಕುಂದಾಪುರ, ಅ.31: ವೃದ್ಧೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಕಟ್‌ಬೇಲ್ತೂರು ಎಂಬಲ್ಲಿ ನಡೆದಿದೆ.
ಮೃತರನ್ನು ಕಟ್‌ಬೇಲ್ತೂರಿನ ರಾಮಚಂದ್ರ ಎಂಬವರ ಪತ್ನಿ ಅಕ್ಕಮ್ಮ(75) ಎಂದು ಗುರುತಿಸಲಾಗಿದೆ. ಇವರು ಅ.29ರಂದು ಬೆಳಿಗ್ಗೆೆಯಿಂದ 30ರ ಬೆಳಿಗ್ಗೆ 6ಗಂಟೆ ನಡುವಿನ ಅವಧಿಯಲ್ಲಿ ಮನೆಯ ಬಾವಿಯ ರಾಟೆಗೆ ಸಿಲುಕಿದ ಹಗ್ಗವನ್ನು ತಪ್ಪಿಸಲು ಪ್ರಯತ್ನಿಸಿದಾಗ ಮುಗ್ಗರಿಸಿ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.