48 ಗಂಟೆಗಳ ಸಂಗೀತ ಕಾರ್ಯಕ್ರಮಕ್ಕೆ ಸಿದ್ಧತೆ
Update: 2016-10-31 23:30 IST
ಮಂಗಳೂರು, ಅ.31: ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಮತ್ತು ಪಂಡಿತ್ ಮಾಧವ ಗುಡಿ ಅವರ ನೆನಪಿನಲ್ಲಿ ಸ್ಕೂಲ್, ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ವರ ಮಹಾಯಾಗ ಟ್ರಸ್ಟ್ ವತಿಯಿಂದ ಸತತ 48 ಗಂಟೆಗಳ ಕಾಲ ನಿರಂತರ ಶಾಸೀಯ ಸಂಗೀತ ಹಾಡಿ ವಿಶ್ವ ದಾಖಲೆ ಸ್ಥಾಪಿಸಲಿದ್ದೇನೆ ಎಂದು ಪಂಡಿತ್ ಪ್ರಸನ್ನ ಗುಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ಏಲಾನ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುಮಾರು 125 ಕಲಾವಿದರು ಭಾಗವಹಿಸಲಿದ್ದಾರೆ. ಡಿ.30ರಿಂದ ಜ.1ರವರೆಗೆ ಗಿನ್ನೆಸ್ ದಾಖಲೆಯ ನಿಯಮದ ಪ್ರಕಾರ ಈ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ದೇವರಾಜ್ ಕಿಣಿ ಉಪಸ್ಥಿತರಿದ್ದರು.