ಇಂದಿನ ಕಾರ್ಯಕ್ರಮ

Update: 2016-10-31 18:00 GMT

ಉಡುಪಿ ಜಿಲ್ಲೆ
ಕನ್ನಡ ರಾಜ್ಯೋತ್ಸವ ಆಚರಣೆ: ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ. ಬೆಳಗ್ಗೆ 8 ಕ್ಕೆ ಕುಂಜಿಬೆಟ್ಟಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಕನ್ನಡನಾಡು ನುಡಿ ಸಂಸ್ಕೃತಿಯನ್ನು ಪ್ರತಿಬಿಂಭಿಸುವ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ, 9ಕ್ಕೆ ಬೀಡಿನಗುಡ್ಡೆ ಮಹಾತ್ಮಾಗಾಂಧಿ ಬಯಲು ರಂಗಮಂದಿರ ಮೈದಾನದಲ್ಲಿ ಸಚಿವರಿಂದ ಧ್ವಜಾರೋಹಣ, ಕನ್ನಡ ರಾಜ್ಯೋತ್ಸವ ಸಂದೇಶ, ಪ್ರಶಸ್ತಿ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ.
ಕಾರ್ಡಿಯಾಲಜಿ ಅಪ್‌ಡೇಟ್: ಕೆಎಂಸಿ ಮಣಿಪಾಲದ ಕಾರ್ಡಿಯಾಲಜಿ ವಿಭಾಗದ ವತಿಯಿಂದ ‘ಸೋಂಕು ಮತ್ತು ಹೃದಯ’ ವಿಷಯದ ಕುರಿತು ಮುಂದುವರಿದ ವೈದ್ಯಕೀಯ ಶಿಕ್ಷಣದ ವಿಚಾರಸಂಕಿರಣ ಉದ್ಘಾಟನೆ. ಸಮಯ: ಬೆಳಗ್ಗೆ 9ಕ್ಕೆ. ಸ್ಥಳ:ಡಾ.ಟಿಎಂಎ ಪೈ ಹಾಲ್, ಮೊದಲ ಮಹಡಿ ಕೆಎಂಸಿ ಮಣಿಪಾಲ.
ಪ್ರತಿಭಟನೆ: ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಬೇಡಿಕೆಗೆ ಸ್ಪಂದಿಸದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆಯಿಂದ ಕರಾಳ ದಿನಾಚರಣೆ. ಸಮಯ: ಬೆಳಗ್ಗೆ 11ಕ್ಕೆ. ಸ್ಥಳ: ಕ್ಲಾಕ್‌ಟವರ್, ಸರ್ವಿಸ್ ಬಸ್ ನಿಲ್ದಾಣದ ಎದುರು ಉಡುಪಿ.
ಪೇಜಾವರ ಶ್ರೀಗಳ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:30ಕ್ಕೆ ರಾಜಾಂಗಣದಲ್ಲಿ ವಿದ್ವಾನ್ ವಿ.ಸುಬ್ರಹ್ಮಣ್ಯ ಅವಧಾನಿ ಗುಂಡಿಬೈಲು ಇವರಿಂದ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ರಾತ್ರಿ 7ಕ್ಕೆ ರಾಜಾಂಗಣದಲ್ಲಿ ಬೆಂಗಳೂರಿನ ಅಭಿರಾಮ್ ಗೋಡೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7:30ಕ್ಕೆ ತುಳಸಿ ಪೂಜೆ.
ಯಕ್ಷಗಾನ ತಾಳಮದ್ದಲೆ: ಭಂಡಾರ್‌ಕಾರ್ಸ್‌ ಪದವಿ ಕಾಲೇಜು ಹಾಗೂ ಭಂಡಾರ್‌ಕಾರ್ಸ್‌ ಪಪೂ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭ ನಡೆಯುವ ಯಕ್ಷಗಾನ ತಾಳಮದ್ದಲೆ 40ರ ಸಂಭ್ರಮ. ಗಾನ ವೈವಿದ್ಯ, ಯಕ್ಷಗಾನ ಪ್ರಾತ್ಯಕ್ಷಿಕೆ, ಡಾ.ಎಚ್.ಶಾಂತಾರಾಂ ಯಕ್ಷಗಾನ ಪುರಸ್ಕಾರ ಹಾಗೂ ತಾಳಮದ್ದಲೆ. ಸಮಯ: ಬೆಳಗ್ಗೆ 9ರಿಂದ ಸಂಜೆ 7:30ರವರೆಗೆ. ಸ್ಥಳ: ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್, ಕುಂದಾಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News