ಯಮನ್: ಸೌದಿ ದಾಳಿಯಲ್ಲಿ 60 ಕೈದಿಗಳು ಸಾವು
Update: 2016-10-31 23:52 IST
ಸನಾ (ಯಮನ್), ಅ. 31: ಯಮನ್‌ನ ಕೆಂಪು ಸಮುದ್ರದ ಬಂದರು ನಗರ ಅಲ್-ಹೊದಾಯ್ದದಲ್ಲಿರುವ ಬಂದಿಖಾನೆಯೊಂದರ ಮೇಲೆ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ರವಿವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 60 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ ಹೊದಾಯ್ದದ ಅಲ್ ಝೇಡಿಯ ಜಿಲ್ಲೆಯಲ್ಲಿರುವ ಜೈಲಿನ ಮೇಲೆ ಸರಣಿ ವಾಯು ದಾಳಿಗಳನ್ನು ನಡೆಸಿ ಸಂಪೂರ್ಣವಾಗಿ ಕೆಡವಲಾಯಿತು ಎಂದು ಕ್ಸಿನುವ ವಾರ್ತಾ ಸಂಸ್ಥೆ ವರದಿ ಮಾಡಿದೆ. ಮುಂಜಾನೆ ಆರಂಭಗೊಂಡ ದಾಳಿಯು ಹಲವು ಗಂಟೆಗಳ ಕಾಲ ಮುಂದುವರಿಯಿತು.