×
Ad

ಪುಲಿಮುರುಗನ್ ಆರ್ಭಟಕ್ಕೆ ದಾಖಲೆಗಳು ಚೆಲ್ಲಾಪಿಲ್ಲಿ

Update: 2016-11-01 11:54 IST

ತಿರುವನಂತಪುರಂ, ನ.1: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಪುಲಿಮುರುಗನ್‌ಚಿತ್ರ ಕೇರಳ ಬಾಕ್ಸಾಫೀಸಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ದಿನ ಕಳೆದಂತೆ ಹೊಸ ಮೈಲಿಗಲ್ಲನ್ನು ಸಾಧಿಸುತ್ತಿದೆ.

ಮೋಹನ್ ಲಾಲ್ ಅವರ ಈ ಹಿಂದಿನ ಸೂಪರ್ ಹಿಟ್ ಚಿತ್ರ ದೃಶ್ಯಂ ದಾಖಲೆಗಳನ್ನು ಪುಲಿಮುರುಗನ್ ಮುರಿದಿದೆ. ಇದೀಗ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟನ ಅಭಿನಯದ ಈ ಚಿತ್ರ ಕೇರಳ ಬಾಕ್ಸಾಫೀಸಿನಲ್ಲಿ 50 ಕೋಟಿ ರೂ. ಕ್ಲಬ್ ಪ್ರವೇಶಿಸಿದ ಪ್ರಥಮ ಮಲಯಾಳಂ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಮಲಯಾಳಂ ಚಿತ್ರಗಳು ಕೇರಳದಾದ್ಯಂತ ಕೇವಲ 180-225 ಚಿತ್ರಮದಿರಗಳಲ್ಲಿ ತೆರೆ ಕಾಣುತ್ತಿರುವುದರರಿಂದ ಇಷ್ಟು ದೊಡ್ಡ ಮೊತ್ತದ ಗಳಿಕೆ ವಿಶೇಷವೆಂದೇ ಹೇಳಬಹುದು.

ತರುವಾಯ ಪುಲಿಮುರುಗನ್ ಮಧ್ಯ ಪೂರ್ವ ದೇಶಗಳಲ್ಲಿ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಜತೆ ಬಂಗಾಳಿ ನಟಿ ಕಮಲಿನಿ ಮುಖರ್ಜಿ ಹಾಗೂ ತೆಲುಗು ನಟ ಜಗಪತಿ ಬಾಬು ಕೂಡ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News