ಗಂಡನ ಲಾಟರಿ ಚಟದಿಂದ ಬೇಸತ್ತ ಪತ್ನಿ ಆತನಿಗೆ ಪಾಠ ಕಲಿಸಲು ಮಾಡಿದ್ದೇನು ? ಆದರೆ ಆಗಿದ್ದೇನು ?

Update: 2016-11-02 06:28 GMT

ಕ್ಯಾರೋಲಿನಾ, ನ.2: ಲಾಟರಿಯ ಚಟ ಹೊಂದಿದ್ದ ತನ್ನ ಪತಿಗೆ ಪಾಠ ಕಲಿಸಲು ಯತ್ನಿಸಿದ ಪತ್ನಿಯೊಬ್ಬಳು ಅದರ ಬದಲು ತನಗೇ ಪಾಠ ಹೇಳಿಸಿಕೊಳ್ಳುವ ಪ್ರಮೇಯ ಎದುರಾದ ಪ್ರಸಂಗವೊಂದು ನಡೆದಿದೆ.

ಲೀಕೆಸ್ಟರ್ನ ಗ್ಲೆಂಡಾ ಬ್ಲ್ಯಾಕ್ ವೆಲ್ ಎಂಬ ಮಹಿಳೆಯ ಪತಿ ಲಾಟರಿ ಖರೀದಿಸಿ ಹಣ ಪೋಲು ಮಾಡುತ್ತಿದ್ದ. ಶನಿವಾರ ಆತ ಆಕೆಗೆ ಸ್ವಲ್ಪ ಪವರ್ ಬಾಲ್ ಟಿಕೆಟ್ ಖರೀದಿಸಲು ಹೇಳಿದ್ದರೆ, ಆಕೆ ಅದರ ಬದಲು 10 ಡಾಲರಿನ ಕ್ಯಾರೋಲಿನಾ ಮಿಲಿಯನ್ಸ್ ಸ್ಕ್ಯಾಚ್-ಆಫ್ ಟಿಕೆಟ್ ಖರೀದಿಸಿದ್ದಳು. ಹೀಗೆ ಮಾಡಿ ಲಾಟರಿಗಳಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂದು ಆತನಿಗೆ ಸಾಬೀತು ಪಡಿಸುವ ಇಚ್ಚೆಯನ್ನು ಆಕೆ ಹೊಂದಿದ್ದಳು. ಆದರೆ ಆಕೆ ಹಾಗೂ ಆಕೆಯ ಪತಿಯ ಅದೃಷ್ಟವೋ ಅದೃಷ್ಟ. ಆ ಟಿಕೆಟ್ ಅವರಿಗೆ ಒಂದು ಮಿಲಿಯನ್‌ ನಗದು ಬಹುಮಾನ ದೊರಕಿಸಿತ್ತು. ‘‘ನಾನು ನನ್ನ ಪತಿಗೆ ನೀಡಿದ ಸಲಹೆಯನ್ನು ನಾನೇ ನುಂಗುವಂತಾಯಿತು. ಆದರೆ ನನಗದರಿಂದ ಸಂತಸವಾಯಿತು,’’ ಎಂದು ಹೇಳುತ್ತಾಳವಳು.

ತೆರಿಗೆ ಕಳೆದು ಆಕೆಗೆ 415,53 ಡಾಲರ್ ಹಣ ದೊರೆತಿದ್ದು ಅದರಿಂದ ಆಕೆ ಒಂದು ಮನೆ ಹಾಗೂ ಸ್ವಲ್ಪ ಭೂಮಿ ಖರೀದಿಸಿದಳಲ್ಲದೆ, ಮಗಳಿಗೆ ಸಹಾಯ ಮಾಡಿ ತನ್ನ ಇಬ್ಬರು ಮೊಮ್ಮಕ್ಕಳ ಕಾಲೇಜು ಶಿಕ್ಷಣಕ್ಕೆಂದು ಹಣವನ್ನೂ ತೆಗೆದಿರಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News