×
Ad

ಶಾಂತಿ-ಸಹಬಾಳ್ವೆಗೆ ಕ್ರೀಡಾಕೂಟಗಳು ಸಹಕಾರಿ : ಸಚಿವ ರೈ

Update: 2016-11-02 15:56 IST

ವಿಟ್ಲ, ನ.2: ಶಾಂತಿ-ಸಹಬಾಳ್ವೆ, ಸೌಹಾರ್ದತೆಯನ್ನು ವೃದ್ದಿಸುವಲ್ಲಿ ಕ್ರೀಡಾ ಕೂಟಗಳ ಪಾತ್ರ ಮಹತ್ತರರವಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಮಂಚಿ-ಕುಕ್ಕಾಜೆಯ ಸೌಹಾರ್ದ ಫ್ರೆಂಡ್ಸ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ಇವುಗಳ ಸಹಬಾಗಿತ್ವದಲ್ಲಿ ಶನಿವಾರ ರಾತ್ರಿ ಇಲ್ಲಿನ ಶಾಲಾ ಮೈದಾನದಲ್ಲಿ ನಡೆದ 60 ಕೆಜಿ ವಿಭಾಗದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ರಂಗಗಳಲ್ಲೂ ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆಯಾಗುತ್ತಿರುವುದು ಮಾತ್ರ ವಿಷಾದನೀಯ. ಈ ಬಗ್ಗೆ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಬೇಬಿ ಕುಂದರ್ ಪಂದ್ಯಾಟ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿಯೂಸ್ ಎಲ್. ರೋಡ್ರಿಗಸ್, ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಡಿಸೋಜ, ಮಂಚಿ ಗ್ರಾ.ಪಂ. ಸದಸ್ಯರಾದ ಜಿ.ಎಂ. ಇಬ್ರಾಹೀಂ, ಶಮೀವುಲ್ಲಾ, ಎನ್. ಕೇಶವ ರಾವ್, ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುರ್ರಹ್ಮಾನ್, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ, ತಾ.ಪಂ. ಮಾಜಿ ಸದಸ್ಯ ಡಿ.ಕೆ. ಹಂಝ, ಕುಕ್ಕಾಜೆ ನವಯುಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ. ಹಸೈನಾರ್, ಉದ್ಯಮಿ ರವಿ ಪೂಜಾರಿ, ಕರ್ನಾಟಕ ನೌಕರರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಉಮಾನಾಥ ರೈ ಮೇರಾವು, ಮಹಾದೇವ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಿ. ದೇವದಾಸ ಅಡಪ, ಪತ್ರಕರ್ತರಾದ ಲತೀಫ್ ನೇರಳಕಟ್ಟೆ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಪ್ರಮುಖರಾದ ಮ್ಯಾಕ್ಸಿ ಕುಕ್ಕಾಜೆ, ನಾಗೇಶ್ ಪೂಜಾರಿ, ಮೊದಿನಬ್ಬ ಕುಕ್ಕಾಜೆ, ಕೆ.ಎಸ್. ಹಮೀದ್ ಕಂಬಳಬೆಟ್ಟು, ಮೋಹನ್, ಹಮೀದ್ ಪುಚ್ಚಕೆರೆ, ರಝಾಕ್ ಬೊಳ್ಳಾಯಿ, ಕೆ.ಬಿ. ಹಮೀದ್, ಉಸ್ಮಾನ್ ಕಲ್ಲಮರೈ, ಸತೀಶ್ ಶೆಟ್ಟಿ, ಮುಹಮ್ಮದ್ ಇಝತ್ ಕುಕ್ಕಾಜೆ, ರಹ್ಮಾನ್ ಪಂಜಾಜೆ, ಝಿಯಾದ್ ಪತ್ತುಮುಡಿ, ಹಂಝ ಮಂಚಿ, ಹಂಝ ಇರಾ, ಮ್ಯಾಕ್ಸಿಮ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು.

ಸಂಘಟಕರಾದ ಮುಹಮ್ಮದ್ ಬಶೀರ್ ಗೇರುಪಡ್ಪು, ಮುಹಮ್ಮದ್ ಫಾರೂಕ್ ಕುಕ್ಕಾಜೆಪದವು, ಮುಹಮ್ಮದ್ ಮುನವ್ವರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸಚಿವ ರಮಾನಾಥ ರೈ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಮಾನಂದ ನೂಜಿಪ್ಪಾಡಿ ಅವರನ್ನು ಸೌಹಾರ್ದ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಸೌಹಾರ್ದ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಕಬೀರ್ ಸ್ವಾಗತಿಸಿ, ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ದಿಡುಪೆ ತಂಡಕ್ಕೆ ಪ್ರಶಸ್ತಿ

32 ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಪಂದ್ಯಾಟದಲ್ಲಿ ದಿಡುಪೆಯ ನವಗ್ರಹ ತಂಡ ಪ್ರಥಮ, ಕಂಬಳಬೆಟ್ಟು ಸೌಹಾರ್ದ ಫ್ರೆಂಡ್ಸ್ ತಂಡ ದ್ವಿತೀಯ, ಬಾಬಾ ಗೋಳಿಯಂಗಡಿ ತಂಡ ತೃತೀಯ ಹಾಗೂ ಶಿವಾಜಿ ವೇಣೂರು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

ದಿಡುಪೆ ತಂಡದ ನಾಸಿರ್ ಉತ್ತಮ ದಾಳಿಗಾರ, ಕಿರಣ್ ಸವ್ಯಸಾಚಿ ಆಟಗಾರ ಹಾಗೂ ಕಂಬಳಬೆಟ್ಟು ತಂಡದ ಮಣಿಕಂಠ ಉತ್ತಮ ಹಿಡಿತಗಾರ ಪ್ರಶಸ್ತಿಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News