×
Ad

ಎಸ್ಕೆಎಸ್ಸೆಸ್ಸೆಫ್ ನೆಹರೂ ನಗರ ಶಾಖೆ ಉದ್ಘಾಟನೆ

Update: 2016-11-02 16:07 IST

ಬಂಟ್ವಾಳ, ನ.2: ಸಮಸ್ತ ಅಧೀನ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್ ನೆಹರೂ ನಗರ ಶಾಖೆಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಅಲ್ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಲ್ ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಇಸ್ಲಾಮಿನ ನೈಜ್ಯ ಆಶಯಾದರ್ಶಗಳನ್ನು ಪ್ರಚುರಪಡಿಸುವ ಸಮಸ್ತವು ಜಗತ್ತಿಗೆ ಮಾದರಿ ಸಂಘಟನೆಯಾಗಿದ್ದು ಅದರ ಎಲ್ಲ ಚಟುವಟಿಕೆಗಳಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ನೆಹರೂನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಪಿ.ಎಸ್.ಅಬ್ದುಲ್ ಹಮೀದ್ ಹಾಜಿ ವಹಿಸಿದ್ದರು. ಮಿತ್ತಬೈಲ್ ಮಸೀದಿಯ ಖತೀಬರಾದ ಖಲೀಲುರ್ರಹ್ಮಾನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘಟನೆ ಎಂಬ ವಿಷಯದಲ್ಲಿ ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬರಾದ ಯು.ಕೆ.ಸ್ವದಕತ್ತುಲ್ಲಾ ಫೈಝಿ ಮಾತನಾಡಿದರು.

ಸಮಾರಂಭದಲ್ಲಿ ಸದರ್ ಮುಅಲ್ಲಿಂ ಫಕ್ರುದ್ದೀನ್ ದಾರಿಮಿ, ನೆಹರುನಗರ ಮಸೀದಿಯ ಗೌರವಾಧ್ಯಕ್ಷ ಪಿ.ಎಂ.ಯೂಸುಫ್ ಹಾಜಿ, ಉಪಾಧ್ಯಕ್ಷ ಇಬ್ರಾಹೀಂ ಮಿಲ್ಕ್, ಕೋಶಾಧಿಕಾರಿ ಹಸನಬ್ಬ ಹಾಜಿ, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಆಲಡ್ಕ, ಕಾರ್ಯದರ್ಶಿ ರವೂಫ್ ನಂದಾವರ, ಕೋಶಾಧಿಕಾರಿ ಉಬೈದುಲ್ಲಾ ಹಾಜಿ ಗೂಡಿನಬಳಿ, ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹನೀಫ್ ಫ್ಯಾಶನ್ ಗೋಲ್ಡ್, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಇಲ್ಯಾಸ್ ಅರ್ಷದಿ, ಮುಸ್ತಫಾ ಅರ್ಷದಿ, ಜಅಫರ್ ಸಾದಿಕ್ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್, ಆಬಿದ್ ದಾರಿಮಿ, ಟಿ.ಎ.ಎಂ.ಹನೀಫ್ ತಾಳಿಪಡ್ಪು, ಇಸ್ಹಾಕ್ ಫೇಶನ್‌ವೇರ್, ಬಶೀರ್ ಮಜಲು, ಶಫೀಕ್ ಆಲಡ್ಕ, ಹಾಮದ್ ಹಾಜಿ ಆಲಡ್ಕ, ಹಕೀಂ ಹಾಜಿ ಕಡಬ ಮೊದಲಾವರು ಉಪಸ್ಥಿತರಿದ್ದರು. ಅಬ್ದುಲ್ ಶುಕೂರು ದಾರಿಮಿ ಕರಾಯ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News