ಶರೀಅತ್ ನಿಯಮಗಳಲ್ಲಿ ಹಸ್ತಕ್ಷೇಪ : ಕಲ್ಲಡ್ಕ ಮಸೀದಿಯಲ್ಲಿ ಖಂಡನಾ ಸಭೆ

Update: 2016-11-02 10:41 GMT

ವಿಟ್ಲ, ನ.2: ಇಸ್ಲಾಂ ಶರೀಅತ್ ನಿಯಮಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ವಿರೋಧಿಸಿ ಖಂಡನಾ ನಿರ್ಣಯ ಸಭೆಯು ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.

ಮಸೀದಿ ಅಧ್ಯಕ್ಷ ಹಾಜಿ ಜಿ. ಅಬೂಬಕರ್ ಗೋಳ್ತಮಜಲು ಸಭಾಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಹುಸೈನ್ ಸೂರಜ್ ಖಂಡನಾ ನಿರ್ಣಯ ಮಂಡಿಸಿದರು.

ಮಸೀದಿ ಪ್ರಧಾನ ಕಾರ್ಯದರ್ಶಿ ಹಾಜಿ ಕೆ. ಅಬ್ದುಲ್ ಹಮೀದ್ ಗೋಲ್ಡನ್, ಉಪಾಧ್ಯಕ್ಷ ಅಬೂಬಕ್ಕರ್ ಮುರಬೈಲು, ಕಾರ್ಯದರ್ಶಿಗಳಾದ ಬಿ.ಎಂ. ಸಾದಿಕ್ ಹಾಗೂ ಹಾಜಿ ಅಬೂಬಕರ್ ಸಾಹೇಬ್, ಸದಸ್ಯರಾದ ಬಿ.ಕೆ. ಇದಿನಬ್ಬ, ಹಾಜಿ ಜಿ. ಯೂಸುಫ್ ಅಮರ್, ಜಿ.ಎಸ್. ಅಬ್ಬಾಸ್, ಜಿ. ಮೊಯ್ದಿನ್, ಹಾಜಿ ಜಿ. ಯೂಸುಫ್ ಹಜಾಜ್, ಜಿ.ಎಚ್. ಝಕರಿಯಾ, ಪಿ.ಕೆ. ಅಬ್ದುಲ್ ಹಮೀದ್ ಮತ್ತು ಜಿ. ಅಬ್ದುಲ್ ಹಮೀದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News