×
Ad

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Update: 2016-11-02 17:42 IST

ಸುಳ್ಯ, ನ.2: ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ದೇವಪ್ಪ ನಾಯ್ಕ (55) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ದೇವಪ್ಪನಾಯ್ಕರು ಕಳೆದ ಕೆಲವು ಸಮಯದಿಂದ ಅಸೌಖ್ಯಕ್ಕೊಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ನವೆಂಬರ್ 1ರಂದು ರಾತ್ರಿ ಕಾಣೆಯಾಗಿದ್ದ ದೇವಪ್ಪರನ್ನು ಮನೆಯವರು ಮತ್ತು ಸ್ಥಳೀಯರು ಸೇರಿ ಹುಡುಕಾಡಿದಾಗ ಸಮೀಪದ ಬೊಳ್ಳಾಜೆ ಶಾಲೆಯ ಬಾವಿಯ ಕಟ್ಟೆಯ ಬಳಿ ಅವರ ಬಟ್ಟೆ ಕಾಣ ಸಿಕ್ಕಿದುದರಿಂದ ಸಂಶಯಗೊಂಡು ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಅವರು ಮೃತದೇಹವನ್ನು ಬಾವಿಯಿಂದ ತೆಗೆದು ಪೊಲೀಸರು ಮಹಜರು ನಡೆಸಿದರು. ಬಳಿಕ ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತರು ಪತ್ನಿ ಲೀಲಾವತಿ, ಪುತ್ರ ಕುಸುಮಾಧರ, ವೇಣುಗೋಪಾಲ, ಸೊಸೆ ವನಿತಾ, ಸಹೋದರರು, ಮೊಮ್ಮಗನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News