ದೇವಸ್ಥಾನಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಸಲ್ಲ: ಜಿ.ಶಂಕರ್

Update: 2016-11-02 13:12 GMT

ಹಿರಿಯಡ್ಕ, ನ.2: ದೇವಸ್ಥಾನಗಳ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮಾಡದೆ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ದೇವರ ಸೇವೆ ಮಾಡಬೇಕು ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಹೇಳಿದ್ದಾರೆ.

ಹಿರಿಯಡ್ಕ ಮಹತೋಭಾರ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ರಾಜಗೋಪುರ ಮತ್ತು ನಗಾರಿ ಗೋಪುರಗಳ ಶಿಲಾನ್ಯಾಸ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಬುಧವಾರ ಮಾತನಾಡುತಿದ್ದರು.

ಈ ದೇವಸ್ಥಾನಕ್ಕೆ ಎಲ್ಲ ಸಮುದಾಯಗಳ ಸೇವೆ ಅಗತ್ಯವಿದೆ. ಆದರೆ ಕೇವಲ ಒಂದೇ ಸಮುದಾಯದವರು ಇದನ್ನು ಮುನ್ನಡೆಸಿಕೊಂಡು ಹೋಗುವುದು ಸರಿಯಲ್ಲ. ಎರಡು ಪಾರ್ಟಿಗಳು ಇರಬಾರದು. ಅವುಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದರು.

ಪುಣೆಯ ಉದ್ಯಮಿ ಬಿ.ಜಗನ್ನಾಥ ಶೆಟ್ಟಿ, ಲೆಕ್ಕ ಪರಿಶೋಧಕ ಎನ್.ಬಿ.ಶೆಟ್ಟಿ ಮಾತನಾಡಿದರು. ಹಿರಿಯಡ್ಕ ದಿವಾಕರ ಶಾಸ್ತ್ರಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಪೆ ರಾಘವೇಂದ್ರ, ಹಿರಿಯಡ್ಕದ ವೈದ್ಯ ಡಾ.ದೇವದಾಸ ಕಾಮತ್, ಉದ್ಯಮಿ ಎಚ್.ಧರ್ಮಪ್ರಕಾಶ ರಾವ್, ನಿವೃತ್ತ ಶಿಕ್ಷಕ ವಿಠಲ ಸೇರಿಗಾರ್ ಮುಖ್ಯ ಅತಿಥಿಗಳಾಗಿದ್ದರು.

ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ತಂತ್ರಿ, ದೇವಸ್ಥಾನ ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ಹರ್ಷವರ್ಧನ ಹೆಗ್ಡೆ, ಕಾರ್ಯಾಧ್ಯಕ್ಷ ಗೋವರ್ಧನದಾಸ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಕುದಿ ವಸಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕುಮಾರ್ ಹಿರಿಯಡಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News