×
Ad

‘ಉರಿ’ ಹನಿಗವನ ಸಂಕಲನ ಬಿಡುಗಡೆ

Update: 2016-11-02 18:52 IST

ಮಂಗಳೂರು, ನ.2: ‘ಉರಿ’ ದಾಳಿಯ ಬಗ್ಗೆ ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ರಚಿಸಿದ ‘ಉರಿ’ ಹನಿಗವನ ಸಂಕಲನವನ್ನು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ನಂದಗೋಕುಲ ತಂಡದ ಸದಸ್ಯರು ವೀರಯೋಧರ ವೇಷ ಧರಿಸಿ ದೇಶಪ್ರೇಮ ಸಾರುವ ನೃತ್ಯ ಮಾಡುವುದರೊಂದಿಗೆ ತಂಡದ ನಾಯಕಿ ಶ್ವೇತಾ ಎಸ್. ಅರೆಹೊಳೆ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃತಿಕರ್ತರ ಮೊಮ್ಮಗಳು ಆರಾಧ್ಯ ಪ್ರಥಮ ಕೃತಿ ಸ್ವೀಕರಿಸಿದರು.

ಈ ಸಂದರ್ಭ ಅರೆಹೊಳೆ ಸದಾಶಿವ ರಾವ್, ಕೂಳೂರು ಮಾಧವ ನಾಯಕ್, ಟೀಕೆ ಕಾಸರಗೋಡು, ಪಲ್ಲವಿ ವಿಶ್ವಾಸ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News